ಕರಡಕಲ್ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಗ್ರಾಮದ ಜನರು ಪುರಸಭೆಗೆ ಚೀಮಾರಿ

ಲಿಂಗಸುಗೂರು.ಜು.೨೮- ಪುರಸಭೆ ವ್ಯಾಪ್ತಿಯಲ್ಲಿ ಬರುವ ಕರಡಕಲ್ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ ಗ್ರಾಮದ ಜನರು ಪುರಸಭೆ ಆಡಳಿತ ಯಂತ್ರದ ವಿರುದ್ಧ ಗ್ರಾಮದ ಜನರು ಚೀಮಾರಿ ಹಾಕುವ ಮುಖಾಂತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಕಳೆದ ಹದಿನೈದು ದಿನಗಳಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಪುರಸಭೆ ಆಡಳಿತ ಪಕ್ಷದ ಸದಸ್ಯರು ಕೇವಲ ಅಧಿಕಾರಕ್ಕಾಗಿ ಬಡಿದಾಟ ಮಾಡಿ ಜನರ ಪ್ರಾಣ ಹಿಂಡಿ ಹಿಪ್ಪೆ ಮಾಡುತ್ತಾ ಆಡಳಿತ ಕುಂಟುತ್ತಾ ಸಾಗಿದೆ.
ಕರಡಕಲ್ ಗ್ರಾಮದಲ್ಲಿ ರಸ್ತೆಗಳಲ್ಲಿ ತಿರುಗಾಡಲು ಬರದ ಹಾಗೆ ರಸ್ತೆ ನಿರ್ಮಾಣ ವಾಗಿದೆ ಗ್ರಾಮದ ಮೂರು ವಾರ್ಡ್‌ಗಳಲ್ಲಿ ರಸ್ತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪುರಸಭೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಗ್ರಾಮದ ಮುಖಂಡ ಮರಿಯಪ್ಪ ಗಂಭೀರ ನೇರವಾಗಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ೨೩ ವಾರ್ಡ್ ಗಳ ಸಮಸ್ಯೆಗಳ ಆಗರವಾಗಿದೆ ಅಧಿಕಾರಿಗಳಿಗೆ ಏಳೋರು ಇಲ್ಲ ಕೇಳೋರು ಇಲ್ಲ ಎಂಬಂತೆ ಕಾಣುತ್ತದೆ ಆಡಳಿತ ನಡೆಸುವ ನೈತಿಕತೆ ಪ್ರದರ್ಶನ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಪುರಸಭೆ ಮುಖ್ಯಾಧಿಕಾರಿ ಜಗನ್ನಾಥ ಜೋಷಿ ಇವರು ಕುಡಿಯುವ ನೀರು ಪೂರೈಕೆಗೆ ಮಾಡದೆ ಇದ್ದರೆ ಪುರಸಭೆ ಆಡಳಿತ ವ್ಯವಸ್ಥೆ ವಿರುದ್ಧ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಮುಂದಾಗುತ್ತದೆ ಎಂದು ನಾಗರಿಕರು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಇಷ್ಟೇಲ್ಲಾ ಸಮಸ್ಯೆಗಳ ಉಲ್ಬಣಿಸಿದರು ಖ್ಯಾರೆ ಎನ್ನದೆ ಕಣ್ಣು ಮುಚ್ಚಿಕೊಂಡು ಕುಳಿತ ಕೊಂಡ ಪುರಸಭೆ ಆಡಳಿತ ಕುಡಿಯುವ ನೀರಿಗೆ ಜನರ ಗೋಳು ಹೇಳತೀರದು ಪುರಸಭೆಯ ಆಡಳಿತದಲ್ಲಿ ಜಿಲ್ಲಾಡಳಿತ ಮದ್ಯೆ ಪ್ರವೇಶಿಸಿ ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ಬರುವ ನಾಗರಿಕರಿಗೆ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಗೆ ಮುಂದಾಗಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.
ಬೇಜವಾಬ್ದಾರಿ ತೋರಿದ ಪುರಸಭೆ ಮುಖ್ಯಾಧಿಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ಸಂಜೆ ವಾಣಿ ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.