ಕರಜಗಿ ಹೋಬಳಿಯ ನಾಡಕಛೇರಿ ಉಪ ತಸೀಲ್ದಾರ್ ವರ್ಗಾವಣೆ ಮಾಡಿ

ಕರಜಗಿ:ಜೂ.29: ಸಾರ್ವಜನಿಕರ ಹೇಳಿಕೆಯಂತೆ ನಾಡಕಛೇರಿ ಉಪ ತಸೀಲ್ದಾರ್ ಬಸವರಾಜ ಸಿಂಪಿ ಅವರ ಮೇಲೆ ಅನೇಕ ಬಾರಿ ಆರೋಪಗಳು ಕೇಳಿ ಬರುತ್ತಿವೆ. ಸಾರ್ವಜನಿಕರು ಕೆಲಸಿನ ಸಲುವಾಗಿ ನಾಡಕಛೇರಿಗೆ ಹೋದರೆ ಸರಿಯಾಗಿ ಸ್ಪಂದಿಸದೆ ಅವರಿಗೆ. ಅವಾಚ್ಯ ಶಬ್ದಗಳಿಂದ ಏರು ಧ್ವನಿಯಲ್ಲಿ ಮಾತನಾಡವುದು ಮಾಡುತ್ತಾರೆ ಮತ್ತು ಸರಿಯಾದ ವೇಳೆಗೆ ನಾಡಕಛೇರಿಗೆ ಬರುದಿಲ್ಲ ಹಿಂತಾ ಅಧಿಕಾರಿ ನಮಗೆ ಬೇಡಾ ಎಂದು ಜಯ ಕರ್ನಾಟಕ ಸಂಘಟನೆಯ ಯುವ ಘಟಕ ತಾಲೂಕಾ ಅಧ್ಯಕ್ಷರಾದ ಸಿದ್ದಾರಾಮ ಸುಲ್ತಾನಪೂರ ಮಾತನಾಡಿ ಅಫಜಲಪುರ ತಾಲೂಕಾ ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ಮಾಶಾಳ ವಲಯ ಅಧ್ಯಕ್ಷ ಬೈಲಪ್ಪ ಪೂಜಾರಿ ಅಶೋಕ ಪರೀಟ ಬಸವರಾಜ ಬೋಸನೂರ ಇತರು ಇದ್ದರು.