ಕರಜಗಿಯಲ್ಲಿ ಭಗೀರಥ ಮಹರ್ಷಿ ಜಯಂತಿ ಆಚರಣೆ

ಕರಜಗಿ: ಎ.28:’ಲೋಕ ಕಲ್ಯಾಣಕ್ಕೆ ಗಂಗೆಯನ್ನು ಧರೆಗೆ ತರಲು ನಿರಂತರ ಶ್ರಮವಹಿಸಿ ಯಶಸ್ಸು ಪಡೆದ ಮಹಾತ್ಮ ಮಹರ್ಷಿ ಭಗೀರಥರಾಗಿದ್ದಾರೆ’ ಎಂದು ಅಫಜಲಪೂರ ತಾಲೂಕಿನ ಕರಜಗಿ ಗ್ರಾಮದ ಉಪ್ಪಾರ ಸಮುದಾಯದ ಅಧ್ಯಕ್ಷ ಅಶೋಕ ಲೋಣರ ಹೇಳಿದರು.

ವಸಂತ ಋತುವಿನ ವೈಶಾಖ ಮಾಸದ ಸಪ್ತಮಿಯಂದು ದೇವಗಂಗೆ ಧರೆಗೆ ಬಂದ ದಿನವಾಗಿ ಪ್ರತಿ ವರ್ಷ ಗಂಗಾಸಪ್ತಮಿ ಎಂದು ಕರೆಯಲಾಗುತ್ತದೆ. ತನ್ನ ಘೋರ ತಪಸ್ಸಿನಿಂದ ದೇವಗಂಗೆಯನ್ನು ಧರೆಗೆ ತಂದ ಮಹರ್ಷಿ ಭಗೀರಥ ಜಯಂತಿಯನ್ನು ಗ್ರಾಮದ ವಿವಿಧ ಸರಕಾರಿ ಕಚೇರಿಗಳಲ್ಲಿ ಹಾಗೂ ಉಪ್ಪಾರ ಸಮುದಾಯದ ವತಿಯಿಂದ ಕೂಡಾ ಆಚರಣೆ ಮಾಡಲಾಯಿತು.

ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಲಾಯಿತು. ನಂತರ ಪಾಲ್ಗೊಂಡ ಎಲ್ಲ ಭಕ್ತರಿಗೆ ಪ್ರಸಾದ
ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ನಿಂಗಪ್ಪ ಕೊನಲ್ಲಿ, ಸಮುದಾಯದ ಮುಖಂಡರಾದ ಮಹಾದೇವ ಕರಂಡೆ, ದಯಾನಂದ ಬೋರುಟಿ,. ಪರಶುರಾಮ ಸಾಲೋಟಗಿ, ದತ್ತು ಲೋಣರ, ಬಸವರಾಜ ಗಳವೇ ಸುಧಾಕರ ಗಳವೆ, ಸಿದ್ದಪ್ಪ ರೆಬಿನಳ,. ಪರಶುರಾಮ ಮನಗೆನಿ, ಜಗು ಲೋಣಾರ, ಶಿವಶಂಕರ ಕರಂಡೆ , ಈರಣ್ಣ ಹೊನ್ನುರ, ಸೇರಿದಂತೆ ಉಪ್ಪಾರ ಸಮಾಜದ ಮುಖಂಡರು ಇದ್ದರು.