ಕರಕಿಹಳ್ಳಿ ಅಪೂರ್ಣ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಸದಸ್ಯರು ವಿರೋಧ ಪಿಡಿಒ ಮತ್ತು ಇಒ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಲು ಆಗ್ರಹ

ಯಡ್ರಾಮಿ:ಜ.21:ತಾಲೂಕಿನ ಕರಕಿಹಳ್ಳಿ ಗ್ರಾಮ ಪಂಚಾಯತ್ ಕಾರ್ಯಾಲಯ ಉದ್ಘಾಟನೆ ಸಮಾರಂಭಕ್ಕೆ ಕೇವಲ ಪಿಡಿಒ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರ ಪತಿಯೂ ಸೇರಿಕೊಂಡು ಗ್ರಾಮ ಪಂಚಾಯತಿ ಸದಸ್ಯರಿಗೆ ಮಾಹಿತಿ ನೀಡದೇ ಉದ್ಘಾಟನೆ ಮಾಡಲು ಹೊರಟಿದ್ದಾರೆ ಎಂದು ಚಂದ್ರಶೇಖರ ಹರನಾಳ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಶನಿವಾರ ಕರಕಿಹಳ್ಳಿ ಗ್ರಾಮದಲ್ಲಿ ಪತ್ರಿಕಾಗೋಷ್ಠೀ ಮೂಲಕ ಹರನಾಳ ಅವರು ಮಾತನಾಡಿ.
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ.ಗ್ರಾಮ ಪಂಚಾಯತಿ ಕಟ್ಟಡ ಬಾಗಿಲು ಕಿಟಕಿಗಳು ಇಲ್ಲದೆ ಅಪೂರ್ಣ ಕಟ್ಟಡ ಉದ್ಘಾಟನೆ ಸಮಾರಂಭಕ್ಕೆ.

ದಲಿತ ಮಹಿಳೆ ಎಂಬ ಕಾರಣಕ್ಕೆ ಶಿವಕಾಂತಮ್ಮ ಈರಣ್ಣ ಕರಕಿಹಳ್ಳಿ ಉಪಾಧ್ಯಕ್ಷ ಅವರಿಗೆ ಮಾಹಿತಿ ನೀಡದೆ.ಸಮಾರಂಭ ಬಗ್ಗೆ ಗ್ರಾಮ ಸದಸ್ಯರ ಮೀಟಿಂಗ್ ಮಾಡದೇ.ಕ್ಷೇತ್ರದ ಶಾಸಕ ಅಜಯಸಿಂಗ್ ಅವರಿಗೂ ನಿರ್ಲಕ್ಷವಹಿಸಿ ತೊರಿಸಿ ಉದ್ಘಾಟನೆ ಮಾಡುತ್ತಿದ್ದಾರೆ.

ಕೂಡಲೇ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತೇಶ ಪುರಾಣಿಕ ಅವರ ಮೇಲೆ ಉಪಾಧ್ಯಕ್ಷ ದಲಿತ ಎಂಬ ಕಾರಣಕ್ಕೆ ಆಹ್ವಾನ ನೀಡದೆ ಉಪಮಾನ ಮಾಡಿದ್ದಾರೆ.

ತಕ್ಷಣ ಜಾತಿ ನಿಂಧನೆ ಯೋಜನೆ ಅಡಿಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲು ಮಾಡಬೇಕು.ಹಾಗೂ ಯಡ್ರಾಮಿ ಸ್ಥಳಿಯವಾಗಿರುವ ತಾಲೂಕು ಇಒ ಮಹಾತೇಂಶ ಪುರಾಣಿ ಅವರನ್ನು ಹಾಗೂ ಪಿಡಿಒ ಕೂಡಲೇ ಅಮಾನತ್ತು ಮಾಡಬೇಕು ಎಂದು ಸರ್ವ ಸದಸ್ಯರು ಹಾಗೂ ಪಂಚಾಯತಿಯ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯತಿ ಅಧ್ಯಕ್ಷರ ಪತಿಯೂ ಉದ್ಘಾಟನೆಗೆ ಕುರಿ ಕೋಳಿ ಬಲಿ ಕೊಟ್ಟು ಊಟದ ವ್ಯವಸ್ಧೆ??…

ಸರ್ಕಾರಿ ಪಂಚಾಯತಿ ಕಚೇರಿಯ ಉದ್ಘಾಟನೆಗೆ ಸಿಹಿ ಊಟ ಮಾಡಿಸುವುದು ಕಾಮನ್ ಆದರೆ ಕುರಿಗಳನ್ನು ಬಲಿ ಕೊಟ್ಟು ಊಟದ ವ್ಯವಸ್ಧೆ ಮಾಡಿದ್ದು ಗ್ರಾಮ ಪಂಚಾಯತಿ ಅಧಕ್ಷರ ಪತಿ.

ಗ್ರಾಮ ಪಂಚಾಯತಿಯಲ್ಲಿ ನಕಲಿ ಕ್ರೀಯಾ ಯೋಜನೆ ಮೂಲಕ ಲಕ್ಷ ಲಕ್ಷ ಲೋಟಿ ಮಾಡಿ ಈ ರೀತಿಯ ಹೆಂಡತಿಯ ಅಧಿಕಾರ ದುರುಪಯೋಗ ಪಡಿಸಿಕೊಂಡು ಸರ್ವಾಧಿಕಾರದ ಆಡಳಿತ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಪಂಚಾಯತಿ ಕಾರ್ಯಾಲಯದಲ್ಲಿ ತಾಲೂಕು ಅಧಿಕಾರಿ ಮತ್ತು ಪಿಡಿಒ ಅವರು ಅಧ್ಯಕ್ಷರ ಕೈಗೊಂಬೆಯಾಗಿ ಕಾರ್ಯ ಮಾಡುತ್ತಿದ್ದಾರೆ.ತಕ್ಷಣ ಸ್ಥಳೀಯ ತಾಲೂಕು ಅಧಿಕಾರಿಯನ್ನು ಮತ್ತು ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ತು ಮಾಡಬೇಕು ಎಂದು ಸ್ಥಳೀಯ ಶಾಸಕ ಅಜಯಸಿಂಗ್ ಅವರು ಹಾಗೂ ಕಲಬುರಗಿ ಉಸ್ತುವಾರಿ ಸಚಿವರಾದ ಪ್ರಿಯಾಂಕಾ ಖರ್ಗೆ ಅವರಿಗೆ ಪತ್ರಿಕೆ ಮೂಲಕ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಹಣಮಂತ್ರಾಯಗೌಡ ವರವಿ, ಶಿವಕಾಂತಮ್ಮ ಗ್ರಾಮ ಪಂಚಾಯತಿ ಉಪಾಧ್ಯಕ್ಷ, ಸಂಜು ತಿವಾರಿ,ಶಂಕರಲಿಂಗ ಪೂಜಾರಿ,ಗುರಣ್ಣಗೌಡ, ಶರಣಪ್ಪ ದೊಡಮನಿ,ಹೂವಪ್ಪ ಹತ್ತಾರ, ಹಯ್ಯಾಳಪ್ಪ ಕರಕಿಹಳ್ಳಿ ಇತರರು ಸೇರಿದಂತೆ ಉಪಸ್ಥಿತರಿದ್ದರು.