ಕಮ್ಮಾ ಮಹಾಜನ ಸಂಘದಿಂದಬುಡಾ ಅಧ್ಯಕ್ಷರಿಗೆ ಗೌರವ ಸಮರ್ಪಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.12: ನಗರದ ಕಮ್ಮಾ ಭವನದಲ್ಲಿ ನಿನ್ನೆ ಕಮ್ಮಾ ಮಹಾಜನ ಸಂಘದಿಂದ  ಬಳ್ಳಾರಿ ನಾಗರಾಭಿವೃದ್ಧಿ ಪ್ರಾಧಿಕಾರಕ್ಕೆ ಎರಡನೇ ಬಾರಿ  ಅಧ್ಯಕ್ಷರಾಗಿ ನೇಮಕಗೊಂಡಿರುವ  ಜೆ.ಎಸ್.ಆಂಜನೇಯುಲು ಅವರನ್ನು ಸನ್ಮಾನಿಸಿಗೌರವಿಸಲಾಯ್ತು.
ಈ ಸಂದರ್ಭದಲ್ಲಿ ಮಹಾ ನಗರ ಪಾಲಿಕೆಯ ಸದಸ್ಯರು ಹಾಗೂ ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು,  ಸದಸ್ಯರಾದ ಎಂ.ಪದ್ಮಾ ವಿವೇಕ್, ಎಂ.ಮುಲ್ಲಂಗಿ ನಂದೀಶ್, ಎಂ. ರಾಮಾಂಜಿನೆಯುಲು, ಎಂ.ಪ್ರಭಂಜನ್ ಕುಮಾರ್, ಪಿ.ವಿವೇಕ್ (ವಿಕ್ಕಿ ), ಕೆ.ತಿಲಕ್ ಅವರನ್ನು ಸಹ  ಸನ್ಮಾನಿಸಲಾಯ್ತು. ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.