ಕಮ್ಮಸಂದ್ರ ಗ್ರಾಪಂ ಅಧ್ಯಕ್ಷ ಸುರೇಶ್ ಕಾಂಗ್ರೆಸ್ ಸೇರ್ಪಡೆ

ಕೆಜಿಎಫ್:ಮೇ:೪:ಕೆಜಿಎಫ್ ವಿಧಾನಸಭೆ ಕ್ಷೇತ್ರದ ಪ್ರಭಲ ಬಿಜೆಪಿ ಟಿಕೇಟ್ ಆಕಾಂಕ್ಷಿತರಾಗಿದ್ದ ಕಮ್ಮಸಂದ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ್ ತಮ್ಮ ಅಪರ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷವನ್ನು ತೊರೆದು ಶಾಸಕಿ ರೂಪಕಲಾಶಶಿಧರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇಪರ್ಡೆಗೊಂಡರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಮ್ಮಸಂದ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ್ ಕ್ಷೇತ್ರದಲ್ಲಿ ಕಳೆದ ೩ ವರ್ಷಗಳಿಂದ ನಗರ ಹಾಗೂ ಗ್ರಾಮೀಣಭಾಗದಲ್ಲಿ ಕಂಬಳಿ, ಶಾಲೆಗಳಿಗೆ ಶುದ್ದ ಕುಡಿಯುವ ನೀರಿನ ಘಟಕ , ಶಾಲಾ ವಿಧ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸಕ್ತ ದೇವಾಲಯಗಳಿಗೆ ಧಾನ ಧರ್ಮಗಳನ್ನು ಮಾಡಿಕೊಂಡು ಬರುತ್ತಿದ್ದೆ ಮತ್ತು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಸಮಾಜ ಸೇವೆಯನ್ನು ಮಾಡುತ್ತಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ವಿಧಾನಸಭೆಗೆ ಸ್ಪರ್ಧಿಸಲು ಟಿಕೇಟ್ ಬಯಸಿದ್ದೇ ಆದರೆ ವಿಧಿಯಾಟ ನಾನು ಯಾರ ವಿರುದ್ಧವಾಗಿಯು ಮಾತನಾಡುವುದಿಲ್ಲ ಮತ್ತು ದೋಷಿಸುವುದಿಲ್ಲ ಟಿಕೇಟ್ ಕೈ ತಪ್ಪಿರುವುದು ನನ್ನ ಹಣೆ ಬರಹ ಎಂದು ತಿಳಿದುಕೊಂಡು ಇದ್ದೇ ಆದರೆ ಕ್ಷೇತ್ರದಲ್ಲಿ ನನ್ನಂತೆ ಜನಸೇವೆನ್ನು ಮಾಡುತ್ತಿರುವ ಶಾಸಕಿ ರೂಪಕಲಾಶಶಿಧರ್ ರವರ ಜನಸೇವೆಯನ್ನು ಮೆಚ್ಚಿ ಅವರೊಂದಿಗೆ ಕೈಜೊಡಿಸಲು ಕಾಂಗ್ರೆಸ್ ಪಕ್ಷವನ್ನು ಸೇರಿದ್ದು ಯಾವುದೆ ಬೇಡಿಕೆಗಳನ್ನು ಇಟ್ಟಿಲ್ಲ ಎಂದು ಹೇಳಿದರು.
ಶಾಸಕಿ ರೂಪಶಶಿಧರ್ ಮಾತನಾಡಿ ಕಮ್ಮಸಂದ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಬಿಜೆಪಿ ಟಿಕೇಟ್ ಆಕಾಂಕ್ಷಿತರಾಗಿದ್ದ ಸುರೇಶ್ ಉತ್ತಮ ವ್ಯಕ್ತಿಯಾಗಿದ್ದು ಕ್ಷೇತ್ರದಲ್ಲಿ ತಮ್ಮದೆ ಆದ ಜನಸೇವೆಯನ್ನು ಮಾಡುತ್ತಾ ಹೆಚ್ಚು ಜನಪ್ರೀಯತೆಯನ್ನು ಗಳಿಸಿದ್ದಾರೆ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದು ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ ಎಂದು ಹೇಳಿದರು.
ಈ ವೇಳೆ ಕಮ್ಮಸಂದ್ರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ನಾಗರಾಜ್,ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯರಾಘವರೆಡ್ಡಿ ಸದಸ್ಯ ಆನಂದ ಹಾಗೂ ಇತರರು ಹಾಜರಿದ್ದರು.