ಕಮ್ಮವಾರಿ ಸಮಾಜ ಮುಖಂಡರನ್ನು ಭೇಟಿ ಮಾಡಿದ ಕಾಂಗ್ರೆಸ್ ಆಭ್ಯರ್ಥಿ

ರಾಯಚೂರು.ಏ.೦೧- ನಗರದ ಕಾಕತೀಯ ಕಾಲೋನಿಯಲ್ಲಿ ಕಮ್ಮವಾರಿ ಸಮಾಜದ ಪದಾಧಿಕಾರಿಗಳೊಂದಿಗೆ ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿಯಾದ ಜಿಕುಮಾರ್ ನಾಯಕ್ ಹಾಗೂ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್‌ಎಸ್ ಬೋಸರಾಜು ಅವರು ಸೌಹಾರ್ಧಯುತವಾಗಿ ಸಮಾಲೋಚನೆ ನಡೆಸಿದರು.ಈ ಸಂದರ್ಭದಲ್ಲಿ ಕಮ್ಮವಾರಿ ಸಮಾಜದ ಮುಖಂಡರಾದ ಬಿ.ಪ್ರಸಾದ್ ರಾವ್, ಅಬಲು ಸತ್ಯನಾರಾಯಣ, ಆನಂದ ರಾವ್, ನಾಗೇಶ್ವರ ರಾವ್, ಗುಪಿಲ್ ಪ್ರಸಾದ್, ಎಸ್.ಪ್ರಸಾದ್, ಜಯಂತರಾವ್ ಪತಂಗೆ, ಮಡ್ಡಿ ಪೇಟೆ ಶ್ರೀನಿವಾಸ್, ಸುಬ್ರಮಣ್ಯಂ, ಸುಮಂತ್, ರಾಮಕೃಷ್ಣ ಎನ್, ಆದಿನಾರಾಯಣ ಕಾಂಗ್ರೆಸ್ ಮುಖಂಡರಾದ ಜಯಣ್ಣ, ಕೆ.ಶಾಂತಪ್ಪ, ರುದ್ರಪ್ಪ ಅಂಗಡಿ, ಬದ್ರಿ ನಾರಾಯಣ, ಜಿ.ಶಿವಮೂರ್ತಿ, ಬಸವರಾಜ ಪಾಟೀಲ್ ಅತ್ತನೂರು, ರಮರಾವ್, ಸುರೆಂದ್ರ ಬಾಬು, ರಾಂಪೂರ್ ರವಿ, ಮಡ್ಡಿಪೇಟೆ ಶ್ರೀನಿವಾಸ್ ಸೇರಿದಂತೆ ಅನೇಕರಿದ್ದರು.