ಕಮಲ ಬಿಟ್ಟು ಕೈ ಹಿಡಿದ ಶ್ರೀರಾಮುಲು ಅಪ್ತ ವಿಕೆ ಬಸಪ್ಪ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.05; ತೀವ್ರ ಕುತೂಹಲ ಮೂಡಿಸತೊಡಗಿದೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಜಿದ್ದಾಜಿದ್ದಿನ ರಾಜಕೀಯ ಅಖಾಡ.ಕಾಂಗ್ರೆಸ್ ಈಗ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಆಪರೇಷನ್ ಮಾಡತೊಡಗಿದೆ.
ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಅತ್ಯಾಪ್ತ ಹಾಗೂಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿ.ಕೆ. ಬಸಪ್ಪ ಅವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ.  ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ನಿನ್ನೆ ಸಂಜೆ ಕಾಂಗ್ರೆಸ್ ಸೇರಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ರಾಜ್ಯಸಭಾ ಸದಸ್ಯ ಡಾ:ಸೈಯದ್ ನಾಸೀರ್ ಹುಸೇನ್ ಹಾಗೂ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಅವರ ಸಮ್ಮುಖದಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ  ಕೌಲ್ ಬಜಾರ್ ನಲ್ಲಿ  ನಡೆದ ಪಕ್ಷದ ಕಾರ್ಯಕ್ರಮದಲ್ಲಿ  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಲೋಕಸಭಾ ಎಲೆಕ್ಷನ್ ಇನ್ನೆರೆಡು ದಿನ ಬಾಕಿ ಇರುವಾಗ ಬಿಜೆಪಿ ಪ್ರಂಟ್ ಲೈನ್ ಮುಖಂಡರನ್ನು ಆಪರೇಷನ್ ಹಸ್ತ ಮಾಡಿದ್ದಾರೆ ಸಚಿವ ಬಿ.‌ನಾಗೇಂದ್ರ ಅವರು. ಮೊನ್ನೆ ಬೆಳಗಲ್ ಗ್ರಾಮದ 40 ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.
ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಆಪರೇಷನ್ ಮೂಲಕ ರಾಮುಲುಗೆ ಕೌಂಟರ್ ನೀಡಲು ಮುಂದಾಗಿದ್ದಾರೆ. ಮತ್ತಷ್ಟು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರೋ ಸಾಧ್ಯತೆ ಇದೆ.