ಕಮಲ್ ಹಾಸನ್ ಮಾನಸಿಕ ಚಿಕಿತ್ಸೆಗೆ ಒಳಗಾಗಲಿ

ಕೊಯಮತ್ತೂರು,ಏ.೧೧- ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದ ರಾಜಧಾನಿಯನ್ನು ದೆಹಲಿಯಿಂದ ನಾಗ್ಪುರಕ್ಕೆ ಸ್ಥಳಾಂತರಿಸಲಾಗುತ್ತದೆ ಎಂಬ ನಟ-ರಾಜಕಾರಣಿ ಕಮಲ್ ಹಾಸನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರು ಕಮಲ್ ಹಾಸನ್ ಅವರು ಮಾನಸಿಕ ಪುನರ್ವಸತಿ ಕೇಂದ್ರದಲ್ಲಿ ಮನೋವೈದ್ಯರ ಬಳಿ ತಮ್ಮ ತಲೆಯನ್ನು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ.
ಡಿಎಂಕೆಯಿಂದ ರಾಜ್ಯಸಭಾ ಟಿಕೆಟ್‌ಗಾಗಿ ಕಮಲ್ ಹಾಸನ್ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥರು ಆರೋಪಿಸಿದ್ದಾರೆ.
ತಮಿಳುನಾಡಿನ ಡಿಎಂಕೆ ನೇತೃತ್ವದ ಮೈತ್ರಿಕೂಟದ (ಇಂಡಿಯಾ ಬ್ಲಾಕ್) ಭಾಗವಾಗಿರುವ ಕಮಲ್ ಹಾಸನ್ ಅವರು ಬಿಜೆಪಿ ಅಧಿಕಾರಕ್ಕೆ ಬಂದರೆ ರಾಷ್ಟ್ರಧ್ವಜವನ್ನು ಅದರ ತ್ರಿವರ್ಣ ವಿನ್ಯಾಸದಿಂದ ಒಂದೇ ಬಣ್ಣಕ್ಕೆ ಬದಲಾಯಿಸಲು ಪ್ರಯತ್ನಿಸಲಾಗುವುದು ಎಂದು ಆರೋಪಿಸಿದ್ದಾರೆ.
ಕಮಲ್ ಹಾಸನ್ ಅಥವಾ ಬೇರೆ ಯಾರೇ ಆಗಿರಲಿ, ಇಂತಹ ಹೇಳಿಕೆ ನೀಡಿದರೆ ಅವರ ಮೆದುಳನ್ನು ಮಾನಸಿಕ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಎಡ ಮತ್ತು ಬಲ ಮಿದುಳುಗಳೆರಡೂ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ, ಅವರು ಪ್ರಜ್ಞೆ ಹೊಂದಿದ್ದಾರೆಯೇ ಮತ್ತು ಅವರು ತಮ್ಮ ಆಹಾರವನ್ನು ಸರಿಯಾಗಿ ಸೇವಿಸುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕು ಎಂದು ಟೀಕಿಸಿದ್ದಾರೆ.
ಭಾರತದ ರಾಜಧಾನಿಯನ್ನು ನಾಗ್ಪುರಕ್ಕೆ ಹೇಗೆ ಬದಲಾಯಿಸಬಹುದು? ನಾಗ್ಪುರದಲ್ಲಿ ಆರ್‌ಎಸ್‌ಎಸ್ ಕಚೇರಿ ಇದೆ ಎಂದು ಕಮಲ್ ಹಾಸನ್ ತಿಳಿದಿರುವ ಕಮಲ್ ಇದ್ದಕ್ಕಿದ್ದಂತೆ ಭಾರತದ ರಾಜಧಾನಿಯನ್ನು ನಾಗ್ಪುರಕ್ಕೆ ಸ್ಥಳಾಂತರಿಸಲಾಗುವುದು ಎಂದು ತೀರ್ಮಾನಿಸಿದ್ದಾರೆ. ಚೆನ್ನೈ ದೇಶದ ಬೇಸಿಗೆ/ಚಳಿಗಾಲದ ರಾಜಧಾನಿಯಾಗಬೇಕು ಎದು ಒಂದೊಮ್ಮೆ ಅವರು ಹೇಳಿದ್ದರೆ, ನಾನು ಅದನ್ನು ಒಪ್ಪಿಕೊಳ್ಳಬಹುದು. ಆದರೆ ಅವರು ಈ ರೀತಿ ಹೇಳಿರುವುದರಿಂದ ಕಮಲ್ ಹಾಸನ್
ಅವರು ವೈದ್ಯರ ಸಲಹೆಯನ್ನು ಪಡೆಯಬೇಕು. ಅವರು ಉತ್ತಮ ಮನೋವೈದ್ಯರನ್ನು ಕಾಣಬೇಕು ಮತ್ತು ವೃತ್ತಿಪರ ಸಲಹೆಯನ್ನು ಪಡೆಯಬೇಕು’ ಎಂದು ಅಣ್ಣಾಮಲೈ ಹೇಳಿದ್ದಾರೆ.