ಕಮಲಾ ಹ್ಯಾರೀಸ್ ಹತ್ಯೆ ಬೆದರಿಕೆ ನರ್ಸ್ ಬಂಧನ

ವಾಷಿಂಗ್ಟನ್,ಏ.೧೮- ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಫ್ಲೋರಿಡಾದ ನರ್ಸ್‌ನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಅಮೆರಿಕದ ರಹಸ್ಯ ಸೇವೆ ತನಿಖೆ ನಡೆಸಿದ ವೇಳೆ ಈ ಅಂಶ ಬೆಳಕಿಗೆ ಬಂದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬಂಧಿತ ನರ್ಸ್‌ನ್ನು ನಿಬಿಯಾನೆ ಪೆಟಿಟ್ ಫೆಲ್ಸ್ ಎಂದು ಗುರುತಿಸಲಾಗಿದೆ.
ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಉಪಾಧ್ಯಕ್ಷರ ಚುನಾವಣೆಯಲ್ಲಿ ೫೬ ವರ್ಷದ ಕಮಲಾ ಹ್ಯಾರೀಸ್ ಇದೇ ಮೊದಲ ಬಾರಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಫೆ. ೧೩ ರಿಂದ ಫೆ. ೧೮ರವರೆಗೆ ಉಪಾಧ್ಯಕ್ಷರನ್ನು ಕೊಲ್ಲುವುದಾಗಿ ಮತ್ತು ದೈಹಿಕ ಹಾನಿ ಮಾಡುವುದಾಗಿ ಉದ್ದೇಶಪೂರ್ವಕವಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
೨೦೦೧ ರಿಂದ ಜಾಕ್ಸನ್ ಆರೋಗ್ಯ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹ್ಯಾರೀಸ್ ಬೆದರಿಕೆ ಆರೋಪಕ್ಕೆ ಗುರಿಯಾಗಿದ್ದಾರೆ.