ಕಮಲಾವತಿ ನದಿಗೆ ಅಡ್ಡಲಾಗಿ ಬ್ರಿಜ್ ಕಮ್ ಬ್ಯಾರೇಜ್ ಕಾಮಗಾರಿಗೆ ಚಾಲನೆ

ಸೇಡಂ,ಮಾ,15: ಪಟ್ಟಣದ ಕೋಲಿವಾಡ ದೊಡ್ಡ ಅಗಸಿಗೆ ಹೊಂದಿಕೊಂಡಿರುವ ಕಮಲಾವತಿ ನದಿಗೆ ಸುಮಾರು 15 ಕೋಟಿ ವೆಚ್ಚದಲ್ಲಿ ಅಡ್ಡಲಾಗಿ ನಿರ್ಮಿಸಿರುವ ಬ್ರಿಜ್ ಕಮ್ ಬ್ಯಾರೇಜ್ ಕಾಮಗಾರಿಗೆ ಬ್ಲಾಕ್ ಕಾಂಗ್ರೆಸ್ ತಾಲೂಕಾ ಅಧ್ಯಕ್ಷರಾದ ಶಿವಶರಣ ರೆಡ್ಡಿ ಪಾಟೀಲ್ ಚಾಲನೆ ನೀಡಿ ಮಾತನಾಡಿದರು. ಈ ವೇಳೆಯಲ್ಲಿ ಬ್ಲಾಕ್ ಕಾಂಗ್ರೆಸ್ ಯುವ ಅಧ್ಯಕ್ಷರಾದ ಭೀಮಶಂಕರ್ ಕೊಳ್ಳಿ, ವಾರ್ಡ್ ಸದಸ್ಯರಾದ ಸಂತೋಷ್ ತಳವಾರ್, ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸತ್ತರ್ ನಾಡೇಪಲ್ಲಿ, ಸಂಪತ್ ಕುಮಾರ್ ಬಾಂಜಿ, ಯೂನುಸ್ ಸವೇರ, ಅಮೃತ್ ತೊಟ್ನಳ್ಳಿ, ದೀಪಕ್ ಬಾಗೋಡಿ, ಶಿವಕುಮಾರ್ ಜಿವಣಗಿ, ಹಾಗೂ ಇಲಾಖೆ ಅಧಿಕಾರಿಗಳಾದ ಶಿವಕುಮಾರ್ ಬಿರಾದಾರ್, ಹಣಮಂತ, ಶಿವರಾಜ್ ಗುತ್ತಿಗೆದಾರರಾದ ಚಂದ್ರಶೇಖರ್ ರೆಡ್ಡಿ ಸೇರಿದಂತೆ ಹಲವರು ಇದ್ದರು.