ಕಮಲಾಪುರ “ವಿಜಯನಗರ ಮಹಾನಗರ” ಪಾಲಿಕೆಗೆ ಬೇಡ ಒಮ್ಮತದ ನಿರ್ಣಯಕ್ಕೆ ಬಂದ ಪ್ರಗತಿಪರ ಸಂಘಟನೆಗಳು


ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ16: ಉದ್ದೇಶಿತ ನೂತನ ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆ ಮಹಾನಗರ ಪಾಲಿಕೆಯ ಕರಡುಪ್ರತಿ ರಚನೆಯಲ್ಲಿ ಕಮಲಾಪುರ ಪಟ್ಟಣ ಪಂಚಾಯಿತಿಯನ್ನು ಯಾವುದೆ ಕಾರಣಕ್ಕೂ ಸೇರಿಸಬಾರದು ಎಂದು ಕಮಲಾಪುರದ ಸ್ಥಳೀಯ ಮುಖಂಡರು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.
ಈ ಕುರಿತು ಬುಧವಾರ ಸಂಜೆ ಕಮಲಾಪುರದ ರೈತಭವನದಲ್ಲಿ ಸೇರಿದ್ದ ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಯ ಮುಖಂಡರು, ವಿವಿಧ ಸಮಾಜಗಳ ಮುಖಂಡರು ಮುಕ್ತ ಸಂವಾದ ಮಾಡುವ ಮೂಲಕ ಸಾಧಕ ಭಾದಕಗಳನ್ನು ಚೆರ್ಚಿಸಿ, ಸಾಮಾನ್ಯ ಹಾಗೂ ಬಡಜನರಿಗೆ ಹೆಚ್ಚು ತೊಂದರೆಯಾಗುವುದರಿಂದ  ಕಮಲಾಪುರ ಪಟ್ಟಣ ಪಂಚಾಯಿತಿಯನ್ನು ಯಾವುದೆ ಕಾರಣಕ್ಕೂ ಉದ್ದೇಶಿತ ವಿಜಯನಗರ ಮಹಾನಗರ ಪಾಲಿಕೆಗೆ ಬೇಡ ಅಲ್ಲದೆ ಪಟ್ಟಣ ಪಂಚಾಯಿತಿಯು ಸಹ ತುರ್ತು ಸಭೆ ಸೇರಿ ಸೇರಿಸದಂತೆ ನಿರ್ಣಯಕೈಗೊಂಡು ನಡುವಳಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಆಗ್ರಹಿಸಿ ಹಾಜರಿದ್ದ ಮುಖಂಡರ ಸಮ್ಮುಖದಲ್ಲಿಯೇ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸೈಯದ್ ಅಮಾನುಲ್ಲಾ ರವರಿಗೆ ಮನವಿ ಸಲ್ಲಿಸಲಾಯಿತು.
ಸಭೆಯಲ್ಲಿ ಮುಖಂಡರಾದ ಸೈಯದ್ ಸಮೀವುಲ್ಲಾ, ಎಲ್.ಸಿದ್ಧನಗೌಡ, ಬಿ.ಕೆ.ಚಂದ್ರಶೇಖರ, ಕೊಟಾಲ್ ವೀರೇಶ್, ಮಾಳ್ಗಿ ವಿಶ್ವನಾಥ, ಅಬ್ದುಲ್ ಜಂತೆ, ಸುರೇಶ್‍ಗೌಡ, ನಾಗಯ್ಯ, ಗುರುನಾಥ, ಹನುಮಂತ, ಭರಮಪ್ಪನಾಯಕ, ಸಣ್ಣೇರಪ್ಪ, ಗೋಪಾಲ ಶೆಟ್ಟಿ, ಮಲ್ಲಿಕಾರ್ಜುನ, ಹುಲುಗಪ್ಪ, ಪರಶುರಾಮ, ಕೋರವರ ಭೀಮಣ್ಣ ಷಣ್ಮುಖ, ಸೋಮಶೇಖರ್, ಸೇರಿದಂತೆ ವೀರಭದ್ರನಾಯಕ ಇತರರು ಪಾಲ್ಗೊಂಡಿದ್ದರು.

ವಿಜಯನಗರ ಮಹಾನಗರ ಪಾಲಿಕೆ ರಚನೆಗೆ ನಮ್ಮ ವಿರೋಧವಿಲ್ಲಾ, ಕಮಲಾಪುರ ಪಟ್ಟಣ ಪಂಚಾಯಿತಿಯನ್ನು ವಿಲೀನ ಮಾಡುವುದಕ್ಕೆ ನಮ್ಮ ವಿರೋಧ
ಡಾ.ಬಿ.ಆರ್.ಮಳಲಿ,

ಅಧಿಕಾರ ವಿಕೇಂದ್ರೀಕರಣವಾಗುವ ಬದಲು  ಅಧಿಕಾರ ಕೇಂದ್ರೀಕರಣವಾಗುತ್ತಿರುವುದು ದುರಾದ್ರುಷ್ಟಕರ ಬಹುತೇಕ ಬಡವರು, ದಲಿತರು ಹಿಂದೂಳಿದ ವರ್ಗಗಳೇ ಇರುವುದರಿಂದ ಮಹಾನಗರ ಪಾಲಿಕೆಯ ಹೊರೆ ತಡೆದುಕೊಳ್ಳುವುದು ಕಷ್ಟಕರ ಇರುವ ಹೊರೆಯನ್ನು ತಡೆಯಲಾಗದ ಸ್ಥಿತಿ ಇರುವಾಗ ಕಷ್ಟ
ವೀರಭದ್ರನಾಯಕ