ಕಮಲಾಪುರ “ವಿಜಯನಗರ ಮಹಾನಗರ” ಪಾಲಿಕೆಗೆ ಬೇಡ – ಸಚಿವರಿಗೆ ಮನವಿ

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ19: ಉದ್ದೇಶಿತ ನೂತನ ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆ ಮಹಾನಗರ ಪಾಲಿಕೆಯ ಕರಡುಪ್ರತಿ ರಚನೆಯಲ್ಲಿ ಕಮಲಾಪುರ ಪಟ್ಟಣ ಪಂಚಾಯಿತಿಯನ್ನು ಯಾವುದೆ ಕಾರಣಕ್ಕೂ ಸೇರಿಸಬಾರದು ಎಂದು ಕಮಲಾಪುರದ ಸ್ಥಳೀಯ ಮುಖಂಡರು ಸಚಿವ ಆನಂದಸಿಂಗ್‍ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಈ ಕುರಿತು ಶನಿವಾರ ಸಂಜೆ ಸಚಿವ ಆನಂದಸಿಂಗ್‍ರವನ್ನು ಭೇಟಿ ಮಾಡಿದ ಸ್ಥಳೀಯ ಮುಖಂಡರು ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಯವರು ಒಟ್ಟು ಸೇರಿ ಚೆರ್ಚಿಸಿದಂತೆ ಸಾಧಕ ಭಾದಕಗಳನ್ನು ಚೆರ್ಚಿಸಿ, ಸಾಮಾನ್ಯ ಹಾಗೂ ಬಡಜನರಿಗೆ ಹೆಚ್ಚು ತೊಂದರೆಯಾಗುವುದರಿಂದ  ಕಮಲಾಪುರ ಪಟ್ಟಣ ಪಂಚಾಯಿತಿಯನ್ನು ಯಾವುದೆ ಕಾರಣಕ್ಕೂ ಉದ್ದೇಶಿತ ವಿಜಯನಗರ ಮಹಾನಗರ ಪಾಲಿಕೆಗೆ ಬೇಡ ಎಂಬ ನಿರ್ಣಯಕ್ಕೆ ಬಂದಿರುವುದಾಗಿ ತಿಳಿಸಿದರು.
ಅಲ್ಲದೆ ಪಟ್ಟಣ ಪಂಚಾಯಿತಿಯು ಸಹ ತುರ್ತು ಸಭೆಯೂ ಸಾರ್ವಜನಿಕರ ಅಭಿಪ್ರಾಯದಂತೆ ನಿರ್ಣಯ ಅಂಗೀಕರಿಸಿದ್ದು ವಿಷಯವನ್ನು ತಮ್ಮ ಮಾಹಿತಿಗೆ ತರಲು ನಿರ್ಧರಿಸಲಾಗಿದೆ ಎಂಬ ಮಾಹಿತಿಯನ್ನು ಖುದ್ದಾಗಿ ಕಂಡು ಮನವರಿಕೆ ಮಾಡಲು ಬಂದಿರುವುದಾಗಿ ಹೇಳಿದರು.
ಈ ಕುರಿತು ಮಾತನಾಡಿದ ಸಚಿವ ಆನಂದಸಿಂಗ್ ತಮ್ಮ ಅಭಿಪ್ರಾಯ ಬೇಡ ಎನ್ನುವುದಾಗಿದ್ದರೆ ನನ್ನ ಅಡ್ಡಿಯೇನು ಇಲ್ಲಾ ಅಭಿವೃದ್ಧಿಯ ದೃಷ್ಟಿಯಿಂದ ಆಲೋಚಿಸಿ ಹೇಳಿಕೆ ನೀಡಿದ್ದೆ ತಮ್ಮ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳುವುದಾಗಿ ಹೇಳಿದರು.
ಸಂಚಾಲಕ ವೀರಭದ್ರನಾಯಕ, ಡಾ.ಬಿ.ಆರ್.ಮಳಲಿ ನೇತೃತ್ವದಲ್ಲಿ  ಕೊಟಾಲ್ ವೀರೇಶ್, ಮಾಳ್ಗಿ ವಿಶ್ವನಾಥ, ಅಬ್ದುಲ್ ಜಂತೆ, ಸುರೇಶ್‍ಗೌಡ, ನಾಗಯ್ಯ, ಗುರುನಾಥ, ಹನುಮಂತ, ಭರಮಪ್ಪನಾಯಕ, ಸಣ್ಣೇರಪ್ಪ, ಗೋಪಾಲ ಶೆಟ್ಟಿ, ಮಲ್ಲಿಕಾರ್ಜುನ, ಹುಲುಗಪ್ಪ, ಪರಶುರಾಮ, ಕೋರವರ ಭೀಮಣ್ಣ ಷಣ್ಮುಖ, ಸೋಮಶೇಖರ್, ಸೇರಿದಂತೆ  ಇತರರು ಪಾಲ್ಗೊಂಡಿದ್ದರು.