ಕಮಲಾಪುರ ತಹಶೀಲ್ದಾರ ಕಚೇರಿಗೆ ಡಿ.ಸಿ. ದಿಢೀರ್ ಭೇಟಿ

ಕಲಬುರಗಿ:ಜೂ.11: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಂಗಳವಾರ ಕಮಲಾಪೂರ ತಹಶೀಲ್ದಾರ ಕಚೇರಿಗೆ ದಿಢೀರ್ ಭೇಟಿ ನೀಡಿ ಸಿಬ್ಬಂದಿಗಳ ಕೆಲಸ ಕಾರ್ಯಗಳನ್ನು ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಕಚೇರಿಗೆ ಆಗಮಿಸಿದ ಸಾರ್ವಜನಿಕರ ಸಮಸ್ಯೆ ಸಹ ಆಲಿಸಿದರು. ಪುಟ್ಟ ಮಗುವನ್ನು ಕೈಯಲ್ಲಿ ಎತ್ತಿಕೊಂಡು ಸಾರ್ವಜನಿಕರ ಗಮನ ಸೆಳೆದರು. ಕಮಲಾಪುರ ತಹಶೀಲ್ದಾರ ಮೊಹಮ್ಮದ್ ಮೋಸಿನ್ ಸ್ಥಳದಲ್ಲಿ ಹಾಜರಿದ್ದರು.

ಜಿಲ್ಲಾಧಿಕಾರಿಗಳು ನಂತರ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು. ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಇದ್ದರು.