ಕಮಲಾಪುರ ಕೆರೆಗೆ ಉರುಳಿದ ಬೈಕ್‌.

ಸವಾರ ಸಾವುಸಂಜೆವಾಣಿ ವಾರ್ತೆಹೊಸಪೇಟೆ (ವಿಜಯನಗರ), ಅ.20: ಹೊಸಪೇಟೆಯಿಂದ ಕಮಲಾಪುರದತ್ತ ಸಾಗುತ್ತಿದ್ದ ಬೈಕೊಂದು ಶನಿವಾರ ಸಂಜೆ ನಿಯಂತ್ರಣ ತಪ್ಪಿ ಕಮಲಾಪುರ ಕೆರೆಗೆ ಉರುಳಿದ್ದರಿಂದ ಸವಾರ ಮೃತಪಟ್ಟಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಗಾಯಗೊಂಡ ಘಟನೆ ಜರುಗಿದೆ.ಮೃತನನ್ನು ಮರಿಯಮ್ಮನಹಳ್ಳಿ 6ನೇ ವಾರ್ಡ್‌ನ ರವಿಕುಮಾರ್‌ (28) ಎಂದು ಗುರುತಿಸಲಾಗಿದೆ. ಜಿ 20 ಸಭೆಯ ಹಿನ್ನೆಲೆಯಲ್ಲಿ ಕಳೆದ ಕಳೆದ ತಿಂಗಳು ಹಂಪಿ, ಕಮಲಾಪುರ ರಸ್ತೆಗೆ ಡಾಂಬರು ಹಾಕಿದ್ದರಿಂದ ರಸ್ತೆಯಲ್ಲಿನ ಹೊಂಡಗಳು ಮಾಯವಾಗಿವೆ. ಹೀಗಾಗಿ ವಾಹನಗಳು ವೇಗವಾಗಿ ಚಲಿಸುವುದು ಸಾಧ್ಯವಾಗಿದೆ. ಇದುವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.ಶನಿವಾರ ಸಂಜೆ ಯುವತಿಯನ್ನು ಕಮಲಾಪುರಕ್ಕೆ ಕರೆದೊಯ್ಯುತ್ತಿದ್ದ ಬೈಕ್‌ ಸವಾರನಿಗೆ ಕೆರೆಯ ದಂಡೆಯಲ್ಲಿ ನಿಯಂತ್ರಣ ತಪ್ಪಿದೆ. ಬೈಕ್‌ ನೇರವಾಗಿ ಕೆರೆಗೆ ಧುಮುಕಿದೆ. ಹಿಂಬದಿಯಲ್ಲಿ ಕುಳಿತಿದ್ದ ಯುವತಿ ದಂಡೆಯ ಮೇಲೆಯೇ ಉರುಳಿಬಿದ್ದಿದ್ದರು. ಆದರೆ ಸವಾರ ಬೈಕ್‌ ಸಮೇತ  ಕೆರೆಗೆ ಬಿದ್ದಿದ್ದರಿಂದ ಅವರು ಮೃತಪಟ್ಟರು. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಶವ ಮತ್ತು ಬೈಕ್‌ ಅನ್ನು ಮೇಲೆತ್ತಿದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್‌. ‘ಸಂಜೆವಾಣಿ‘ಗೆ ತಿಳಿಸಿದರು.ಯುವತಿಯನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಯುವತಿಯ ವಿವರ ಪಡೆಯಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.