ಕಮಲಾಪುರದಲ್ಲಿ ಸಂಭ್ರಮದ ಕಾರ್ತಿಕೋತ್ಸವ

ಹರಿಹರ.ಜ.೭;: ಯಾವ ಚೈತನ್ಯ ಶಕ್ತಿ ಈ ವಿಶಾಲ ಪ್ರಪಂಚದಲ್ಲಿ ಕಾರ್ಯವನ್ನು ನಡೆಸುತ್ತದೆಯೋ ಆ ಶಕ್ತಿಯೇ ನಮ್ಮ ದೇಹದಲ್ಲಿ ಕಾರ್ಯನಡೆಸುತ್ತದೆ.ನಮ್ಮ ಶರೀರದಲ್ಲಿರುವ ಪ್ರಚಂಡ ಹಾಗೂ ಪರಿಣಾಮಕಾರಿಯಾದ ಪ್ರಾಣಶಕ್ತಿ ಯನ್ನು ವಶ ಮಾಡಿಕೊಂಡು ನಮ್ಮ ಮನಸ್ಸನ್ನು ಏಕಾಗ್ರಗೊ ಳಿಸಿದಲ್ಲಿ,ಭಗವಂತನ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ.ಭಕ್ತಿ ಮಾರ್ಗವು ಪ್ರಾಧಾನ್ಯತೆ ಹೊಂದಿ ಆನಂದಮ ಯವಾಗಿರುತ್ತದೆ .ನಾವು ನ್ಯಾಯ ನೀತಿ ಧರ್ಮವನ್ನು ಪಾಲಿಸುತ್ತಾ ,ನೈತಿಕ ಜೀವನವನ್ನು ನಡೆಸುತ್ತಾ ಯಾವುದೇ ಮಾರ್ಗದಲ್ಲಿ ಮುನ್ನಡೆದರು ಪಾರಮಾರ್ಥಿಕ ಜ್ಞಾನದ ಅನುಭವದೊಂದಿಗೆ ಪರಿಸಮಾಪ್ತಿಯಾಗುತ್ತದೆ ಎಂದು ಕೋಡಿಯಾಲ ಹೊಸ ಪೇಟೆಯ ಭೂಕೈಲಾಸ ತಪ್ಪೋಕ್ಷೇತ್ರ  ಪುಣ್ಯಕೋಟಿ ಮಠದ ಬಾಲ ಯೋಗಿ ಪೂಜ್ಯ ಶ್ರೀ ಜಗದೀಶ್ವರ ಮಹಾಸ್ವಾಮಿಗಳು ನುಡಿದರು. ಅವರು ತಾಲೂಕಿನ ಕಮಲಾಪುರ ಗ್ರಾಮದ ಶ್ರೀ ಈಶ್ವರ ದೇವರ ಕಾರ್ತಿಕೋತ್ಸವ ದಲ್ಲಿ ದೀಪ ಮೂಡಿಸಿ ನಂತರ ನಡೆದ ಸಭೆಯಲ್ಲಿ ಆಶೀರ್ವಚನ ನೀಡುತ್ತಾ ಮಾತನಾಡುತ್ತಿದ್ದರು.ಪ್ರತಿ ವರ್ಷವೂ ದೇಶಾದ್ಯಂತ ಮಠ-ಮಂದಿರ ದೇವಸ್ಥಾನಗಳಲ್ಲಿ ದೀಪ ಹಚ್ಚುವ ಸಂಕೇತ ಏನೆಂದರೆ ನಮ್ಮಲ್ಲಿ ರುವ ಅಜ್ಞಾನವೆಂಬ ಅಂಧ ಕಾರವನ್ನು ತೊಲಗಿಸಿ  ಜ್ಞಾನವೆಂಬ ಜ್ಯೋತಿ ಯನ್ನು  ಪ್ರತಿಯೊಬ್ಬರ ಹೃದಯದಲ್ಲಿ ಮೂಡಿಸುವುದೇ ಕಾರ್ತಿಕ ಮಾಸದ ವಿಶೇಷತೆಯಾಗಿದೆ .ಈ ನಿಟ್ಟಿನಲ್ಲಿ ಕಮಲಾಪುರ ಗ್ರಾಮದಲ್ಲಿ ತಾವೆಲ್ಲರೂ ಭಕ್ತಿಪೂರ್ವಕವಾಗಿ ನಡೆಸುತ್ತಿರುವ ಒಂದು ಕಾರ್ತಿಕೋತ್ಸವ ಪ್ರತಿಫಲವಾಗಿ ಗ್ರಾಮದಲ್ಲಿ ಸುಭಿಕ್ಷೆ ನೆಲಸಲಿ , ಸುಖ, ಶಾಂತಿ, ನೆಮ್ಮದಿ ದೊರೆಯಲಿ ಸರ್ವರಿಗೂ ಮಂಗಳವಾಗಲಿ ಎಂದು ಶ್ರೀಗಳು ಹರಸಿದರು . ಕೋಡಿಯಾಲ ಹೊಸಪೇಟೆಯ ಪುಣ್ಯಕೋಟಿ ಮಠ ದಲ್ಲಿ ಫೆಬ್ರುವರಿ 2021ರಂದು ನಡೆಯುವ ತುಂಗಾ ಆರತಿ ಮತ್ತು ಪ್ರತ್ಯಂಗಿರಾ ದೇವಿ ಯಾಗಕ್ಕೆ  ಗ್ರಾಮದ ಸರ್ವರನ್ನು ಪ್ರೀತಿಯಿಂದ ಆಹ್ವಾನಿಸಿದರು.ಪ್ರಾರಂಭದಲ್ಲಿ ಶಿಕ್ಷಕರಾದ ಮಾಲತೇಶ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮದ ಇತಿಹಾಸ ,ಪರಂಪರೆ, ಐತಿಹಾಸಿಕ ಹಿನ್ನೆಲೆಗಳ ಕುರಿತಂತೆ ಮತ್ತು ಬಾಲಯೋಗಿ ಜಗದೀಶ್ವರ ಶ್ರೀಗಳ ಅಧ್ಯಾತ್ಮದ ಬಗ್ಗೆ ಶ್ರೀಗಳ ಪವಾಡಗಳ ಬಗ್ಗೆ ಸವಿಸ್ತಾರವಾಗಿ ಸಭೆಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು. ವೇದಿಕೆಯಲ್ಲಿ ಕೆ.ಈಶ್ವರಪ್ಪ, ಬಸವನಗೌಡ್ರು, ಎನ್.ಪಿ.ರುದ್ರಪ್ಪ, ಬಿ.ರಾಜಶೇ ಖರಪ್ಪ, ನೂತನ ಗ್ರಾ.ಪಂ. ಸದಸ್ಯರಾದ ಮಲ್ಲಿಕಾರ್ಜುನ ಬಾವಿಕಟ್ಟಿ, ರಮೇಶ್ ಕಣ್ಣಾಳ್, ಪತ್ರಕರ್ತರಾದ ಕೆ.ಪಂಚಾಕ್ಷರಿ,  .ಬಿ.ಬಿ ಮಲ್ಲೇಶ್, ಮಂಜುನಾಥ ಸ್ವಾಮಿ ಭಾಗವಹಿಸಿದ್ದರು.