ಕಮಲಾಪುರದಲ್ಲಿ ವಿಜ್ರಂಭಣೆಯ ಸವಿತಾ ಮಹರ್ಷಿ ಜಯಂತ್ಯೋತ್ಸವ

ಕಲಬುರಗಿ: ಫೆ,17: ವಿಭಾಗೀಯ ಕಾರ್ಯದರ್ಶಿ ಕಲಬುರಗಿ ಜಿಲ್ಲಾ ಸವಿತಾ ಸಮಾಜ ಯುವಕ ಸಂಘದ ಜಿಲ್ಲಾಧ್ಯಕ್ಷ ಕಮಲಾಪುರ ತಾಲ್ಲೂಕಿನ ಸವಿತಾ ಸಮಾಜದ ಅಧ್ಯಕ್ಷ ಆನಂದ ವಾರಿಕ ಅವರ ನೇತೃತ್ವದಲ್ಲಿ ಕಮಲಾಪುರ ಪಟ್ಟಣದಲ್ಲಿ ವಿಭಿನ್ನ ವಿಶೇಷ ರೀತಿಯಲ್ಲಿ ತಹಸೀಲ್ದಾರ ಕಚೇರಿಯಲ್ಲಿ ತಹಸೀಲ್ದಾರ್ ಮೋಹಮ್ಮದ ಮೋಸಿನ್ ಅವರು ಸವಿತಾ ಮಹರ್ಷಿ ಅವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಹಾಗೂ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ನಂತರ ಸವಿತಾ ಸಮಾಜದ ಕಾರ್ಯಲಯದ ಆವರಣದಲ್ಲಿ ತಹಸೀಲ್ದಾರ್ ಮೋಹಮ್ಮದ್ ಮೋಸಿನ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಬ್ದುಲ್ ಸತ್ತಾರ, ಸಂತೋಷ ರಾಂಪೂರ , ಹಠಯೋಗಿ ಶಂಭುಲಿಂಗಸ್ವಾಮಿ ಗೋಗಿ,ನಿಂಗಪ್ಪ ಪ್ರಭುಧ್ಧಕರ ,ಎ ಪಿ ಎಂ ಸಿ ಮಾಜಿ ಉಪಾಧ್ಯಕ್ಷ ರಾಜಕುಮಾರ್ ಕೋಟೆ, ಕ ಸಾ ಪ ಅಧ್ಯಕ್ಷ ಸುರೇಶ್ ಲೇಂಗಟಿ ವೀರಶೈವ ಲಿಂಗಾಯತ ಸಮುದಾಯದ ಅಧ್ಯಕ್ಷ ಶಶಿಧರ ಮಾಕಾ , ನೇಕಾರ ಸಮುದಾಯದ ಅಧ್ಯಕ್ಷ ಶಿವಕುಮಾರ ಗಾಂಧಿ ಅಶೋಕ್ ಗೌರೆ , ವಿವಿಧ ಸಮುದಾಯಗಳ ಅಧ್ಯಕ್ಷರುಗಳಿಂದ ಸಂವಿಧಾನದ ಪೀಠಿಕೆ ಓದುವ ಮುಖಾಂತರ ಮತ್ತು ನವಜೀವನ ಆಸ್ಪತ್ರೆಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರ ಮತ್ತು ಉಚಿತ ಈ ಶ್ರಮ ಕಾರ್ಡ್ ವಿಶ್ವಕರ್ಮ ಯೋಜನೆಯ ನೊಂದಣಿ ಹಾಗೂ ಆಯುಷ್ಮಾನ್ ಕಾರ್ಡ್ ನೊಂದಣಿಗೆ ಚಾಲನೆ ನೀಡಲಾಯಿತು ಸುಮಾರು ಮೂರು ನೂರಕ್ಕೂ ಹೆಚ್ಚಿನ ಸಾರ್ವಜನಿಕರು ಉಚಿತ ಆರೋಗ್ಯ ತಪಾಸಣೆಯ ಸದುಪಯೋಗವನ್ನು ಪಡೆದರೆ ನಾಲ್ಕು ನೂರಕ್ಕೂ ಹೆಚ್ಚಿನ ಸಾರ್ವಜನಿಕರು ಈ ಶ್ರಮ ಕಾರ್ಡ್ ವಿಶ್ವಕರ್ಮ ಯೋಜನೆಯ ಹಾಗೂ ಆಯುಷ್ಮಾನ್ ಭಾರತ ನೊಂದಣಿಯ ಸದುಪಯೋಗವನ್ನು ಪಡೆದುಕೊಂಡರು ನಲವತ್ತು ಜನರು ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಅಧ್ಯಕ್ಷ ಆನಂದ ವಾರಿಕ ಮಾತನಾಡಿ ನಮ್ಮ ದೇಶದ ಸಮುದಾಯವು ನಂದರು ಮೌರ್ಯರು ಕಲಚೂರಿ ವಂಶಸ್ಥರ ಇತಿಹಾಸ ಹೊಂದಿದೆ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಉಧ್ಯೋಗಿಕವಾಗಿ ರಾಜಕೀಯವಾಗಿ ನಮ್ಮ ಸಮುದಾಯ ಅತಿ ಹಿಂದುಳಿದಿದೆ ಸರ್ಕಾರ ಸರ್ಕಾರದ ಜನಪ್ರತಿನಿಧಿಗಳು ಸಮುದಾಯದ ಬೆನ್ನೆಲುಬಾಗಿ ನಿಲ್ಲಬೇಕೆಂದರು ತಹಸೀಲ್ದಾರ್ ಮೋಹಮ್ಮದ್ ಮೋಸಿನ್ ಮಾತನಾಡಿ ಆನಂದ ವಾರಿಕ ಮಾಡುತ್ತಿರುವ ಸಾಮಾಜಿಕ ಕಳಕಳಿಯ ಸೇವೆ ಇತರರಿಗೆ ಮಾದರಿಯಾಗಿದ್ದು ಸಮಾಜವನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದಾರೆ ಸಮಾಜದ ವಿವಿಧ ಬೇಡಿಕೆಗಳ ಮನವಿಯನ್ನು ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ ಎಂದರು ಅಶೋಕ ಗೌರೆ ಮಾತನಾಡಿ ಸವಿತಾ ಸಮಾಜ ಸಣ್ಣ ಸಮಾಜ ಅಲ್ಲ ಅದು ಶ್ರೇಷ್ಠ ಸಮುದಾಯ ಬಂದಂತಹ ವಿಶೇಷವಾಗಿ ಅತಿಥಿಗಳಿಗೆ ಸಂವಿಧಾನದ ಪೀಠಿಕೆ ಉಡುಗೊರೆಯಾಗಿ ನೀಡುವ ಮೂಲಕ ಗೌರವಿಸಲಾಯಿತು ಇತ್ತೀಚೆಗೆ ಮರಣೋತ್ತರ ಭಾರತರತ್ನ ಜನನಾಯಕ ದಿ ಕರ್ಪೂರಿ ಠಾಕೂರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವಿಸಲಾಯಿತು ರವೀಂದ್ರ ಬಿ ಕೆ ನಿರೂಪಿಸಿದರು ಇದೆ ಸಂದರ್ಭದಲ್ಲಿ ಸಮಾಜದ ಹಿರಿಯರಾದ ರೇವಣಸಿದ್ದಪ್ಪ ವಾರಿಕ,ಸುಬ್ಬಣ್ಣ ಕವನಳ್ಳಿ,ಭೀಮಣ್ಣ ಶ್ರೀಮಂಗಲೆ, ಸಂಜಯ ಕವನಳ್ಳಿ ಬಸವರಾಜ ಕವನಳ್ಳಿ ಸಚೀನ ಶ್ರೀಮಂಗಲೆ ಪ್ರದೀಪ್ ರೇವಣಸಿದ್ದಪ್ಪ ಮಹಾಗಾಂವ ಅಂಕುಶ ಲಾಡಮುಗಳಿ ರಾಹುಲ್ ಹರಕಂಚಿ ಸಂದೀಪ್ ಸಿರಡೋಣ ಸಚೀನ ಮಹೇಶ ಪಾಣೆಗಾಂವ ವಿದ್ಯಾಸಾಗರ ಹಾಬಾಳ ಅಂಬರೀಷ್ ಇಟಗಾ ಗುಂಡು ಅಣಕಲ್ ಅನೀಲಕುಮಾರ ಗೋಗಿ ಪ್ರಕಾಶ್ ಹುಣಸಿಗೇರಾ ಕಿರಣ್ ಕುಮಾರ್ ಚಿಕಲಿಕರ್ ನರಸಿಂಹಲು ಅಡಕಿ ಸುತ್ತಮುತ್ತಲಿನ ಸವಿತಾ ಸಮಾಜದ ಬಂಧುಗಳು ಉಪಸ್ಥಿತರಿದ್ದರು.