ಕಮಲನಗರದಲ್ಲಿ ಯಶವಂತಪೂರ-ಲಾತೂರ ರೈಲು ನಿಲುಗಡೆ

ಬೀದರ,ಫೆ.15:ಜಿಲ್ಲೆಯ ಕಮಲನಗರ ರೈಲ್ವೆ ನಿಲ್ದಾಣದಲ್ಲಿ ಬಹು ಬೇಡಿಕೆಯ ಯಶವಂತಪೂರ – ಲಾತೂರ ವಾಯಾ ಬೀದರ, ಕಮಲನಗರ ರೈಲು (16583/16584) ಕಮಲನಗರ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಮಾಹಿತಿ ನೀಡಿದ್ದಾರೆ.
ಬೀದರ ನಿಂದ ಹಾದುಹೊಗುವ ಎಲ್ಲಾ ರೈಲುಗಳು ಭಾಲ್ಕಿಯಲ್ಲಿ ನಿಲುಗಡೆಗೊಂಡು ಮುಂದೆ ಉದಗೀರ ನಿಲುಗಡೆಗೊಳ್ಳುತ್ತಿದ್ದವು. ಇವುಗಳ ಮಧ್ಯದಲ್ಲಿ ಬರುವ ಕಮಲನಗರದಲ್ಲಿ ರೈಲು ನಿಲುಗಡೆ ಮಾಡಲು ರೈಲ್ವೆ ಇಲಾಖೆಯ ನಿಯಮಗಳು ಇಷ್ಟು ದಿನ ಈ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದವು. ಆದರೆ ನಾನು ರೈಲ್ವೆ ಇಲಾಖೆಯ ನಿರ್ದೇಶನದಂತೆ, ನಿಲುಗಡೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಒದಿಗಿಸಿಕೊಟ್ಟು, ರೈಲ್ವೆ ಸಚಿವರಿಗೆ ಈ ನಿಲುಗಡೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿರುವ ಕಾರಣ ಇಂದು ಈ ರೈಲ್ವೆ ಬೋರ್ಡ ಕಮಲನಗರದಲ್ಲಿ ನಿಲುಗಡೆಗೆ ಒಪ್ಪಿಗೆ ಸೂಚಿಸಿದೆ.ಈ ನಿಲುಗಡೆಯಿಂದ ಕಮಲನಗರ, ಔರಾದ, ಭಾಲ್ಕಿ ತಾಲೂಕಿನ ಗ್ರಾಮಗಳ ಜನರಿಗೆ ತುಂಬಾ ಅನುಕೂಲವಾಗಲಿದೆ, ಹಾಗೂ ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರಿಗೆ ವಿದ್ಯಾಭ್ಯಾಸ, ಆಸ್ಪತ್ರೆ, ಇತರೆ ಕೆಲಸಗಳಿಗೆ ತೆರಳಲು ಇನ್ನಷ್ಟು ಅನುಕೂಲವಾಗಲಿದೆ ಎಂದು ಸಚಿವ ಖೂಬಾ ತಿಳಿಸಿದ್ದಾರೆ.