ಕಮಲನಗರದಲ್ಲಿ ಬೌದ್ಧ ವಿಹಾರ ಲೋಕಾರ್ಪಣೆ

ಕಮಲನಗರ:ಜ.4:ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ನಿರ್ಮಿಸಲಾಗಿರುವ ಬುದ್ಧ ವಿಹಾರದ ಉದ್ಘಾಟನೆ ಸಮಾರಂಭ ನಡೆಯಿತು.

ಬುದ್ಧ ಉಪಾಸಕ, ಜಮೀನು ದಾನಿ ವಿಶ್ವನಾಥ ಮೋರೆ ಬೌದ್ಧ ಧರ್ಮದ ಶಾಸ್ತ್ರೋಕ್ತ ಪದ್ಧತಿಯ ಪ್ರಕಾರ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬೌದ್ಧ ವಿಹಾರ ಉದ್ಘಾಟಿಸಿದರು.

ನಂತರ ಮಾತನಾಡಿ, ಭಗವಾನ ಬುದ್ಧ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರು. ಜಾತಿ ವ್ಯವ್ಸಥೆಯ ನಿರ್ಮೂಲನೆಗಾಗಿ ಈ ಮಹನೀಯರು ಹೋರಾಡಿದರು ಎಂದರು.

ಇವರ ಹೋರಾಟ, ತ್ವ ಸಿದ್ಧಾಂತ ಪ್ರತಿಯೊಬ್ಬರಿಗೂ ದಿಕ್ಸೂಚಿಯಾಗಿದೆ. ಭಗವಾನ್ ಬುದ್ಧ ರಾಜವೈಭೋಗ ತೊರೆದು ಜಗತ್ತಿನ ನಿಜಾರ್ಧ ಅರಿಯಲು ಹೊರಟರು. ದಿವ್ಯಜ್ಞಾನ ಪಡೆದು ಶಾಂತಿ ತ್ವಗಳನ್ನು ಬೋಧಿಸಿದರು. ಬುದ್ಧನ ತ್ವಗಳಿಗೆ ಪ್ರಭಾವಿತರಾಗಿ ಅನೇಕ ಜನರು ಶಾಂತಿ ಮಂತ್ರವನ್ನು ಜಪಿಸಿದರು. ಅಂಗುಲಿಮಾಲನಂತಹ ವ್ಯಕ್ತಿಗಳು ಪರಿವರ್ತನೆ ಹೊಂದಿದರು ಎಂದು ಹೇಳಿದರು.

ಸಾಹಿತಿ ನೀಲಕಂಠರಾವ ಕಾಂಬಳೆ ಮಾತನಾಡಿ, 12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ಮೂಢನಂಬಿಕೆಗಳ ವಿರುದ್ಧ ಹೋರಾಡಿ ಕಲ್ಯಾಣ ಕ್ರಾಂತಿಗೆ ಕಾರಣರಾದ ಅಣ್ಣ ಬಸವಣ್ಣನವರ ಆದರ್ಶಗಳು, ಕಾಯಕ, ದಾಸೋಹ, ತ್ವಗಳು ಪ್ರತಿಯೊಬ್ಬರಿಗೂ ಮಾರ್ಗಸೂಚಿಗಳಾಗಿವೆ ಎಂದರು. ಡಾ. ಬಿ.ಆರ್.ಅಂಬೇಡ್ಕರ್ ಜೀವನವೇ ಆದರ್ಶದ ಪಾಠವಾಗಿದೆ. ಶೋಷಿತರ ಬಾಳು ಹಸನಾಗಿಸಲು ಹಗಲಿರುಳೆನ್ನದೆ ಶ್ರಮಿಸಿದ ಡಾ. ಬಿ.ಆರ್.ಅಂಬೇಡ್ಕರ್ ತ್ವಗಳನ್ನು ನಾವು ಅನುಸರಿಸಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪ್ರವೀಣ ಗಣಪತರಾವ ಕದಂ, ಸುದಾಂ ಭಾಸ್ಕರೆ, ಭವರಾವ ಹೆಡೆ, ಬಾಲಾಜಿ ಕಾಲೇಕರ್, ಶಾಲಿವಾನ ಡೊಂಗ್ರೆ, ಸುರೇಶ ಕಾಂಬಳೆ, ರಾಜಹಂಸ ಸೂರ್ಯವಂಶಿ, ಮನೋಜ ಸಿಂಧೆ, ನಾರಾಯಣ ವಾಘಮಾರೆ, ಸಚೀನ, ಸುಹಾನ, ಅಂಕುಶ, ಸೇರಿದಂತೆ ಹಲವರು ಇದ್ದರು.

ಬಿಜೆಪಿ ಮುಖಂಡ ನಾರಾಯಣ ವಾಘಮಾರೆ ನೇತೃತ್ವದಲ್ಲಿ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.