ಕಮಠಾಣ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಸಂಭ್ರಮ

ಬೀದರ್:ಜೂ.1: ತಾಲ್ಲೂಕಿನ ಕಮಠಾಣ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಶುಕ್ರವಾರ ಸಂಭ್ರಮ, ಸಡಗರದಿಂದ ನಡೆಯಿತು.
ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಆವರಣದಲ್ಲಿ ರಂಗೋಲಿ ಹಾಕಲಾಗಿತ್ತು. ಮಕ್ಕಳು ಶಾಲೆಗೆ ಬರುತ್ತಲೇ ಹೂಮಳೆಗೈದು ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.
ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಲಾಯಿತು. ರಾಷ್ಟ್ರೀಯ ಒಲಂಪಿಕ್ ಯೋಗ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ರಾಧಿಕಾ ಹಾಗೂ ಓಂಕಾರ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಮುಖ್ಯಶಿಕ್ಷಕಿ ಸುನೀತಾ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸಿಆರ್‍ಪಿಗಳಾದ ಬಸವರಾಜ ಕೆರಳೆ, ಶಿವಶಂಕರ, ಎಸ್‍ಡಿಎಂಸಿ ಅಧ್ಯಕ್ಷ ವಿಜಯಕುಮಾರ ರಾಯಕೋಡೆ, ಸದಸ್ಯ ಬಸವರಾಜ ಕ್ಯಾಸಾ ಮಾತನಾಡಿದರು.
ಶಿಕ್ಷಕರಾದ ನಿರ್ಮಲಾ ಪಾಟೀಲ, ಅಶೋಕ ಸಿಂಧೆ, ಜಗದೇವಿ ಸಾವಳೆ, ಸರೋಜಾ ಪಾಟೀಲ, ಸ್ವರೂಪಾರಾಣಿ, ಶಿವಪುತ್ರ, ಕವಿತಾ ಮತ್ತಿತರರು ಇದ್ದರು. ಶಿಕ್ಷಕಿ ಶ್ರೀದೇವಿ ವಿ. ಪಾಟೀಲ ನಿರೂಪಿಸಿದರು. ಭೀಮರಾವ್ ಸ್ವಾಗತಿಸಿದರು. ಸಂಗೀತಾ ವಂದಿಸಿದರು.