ಸೇಡಂ,ಜೂ,10: ಕೋಲಿ ಸಮಾಜದ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ತಿಪ್ಪಣಪ್ಪ ಕಮಕನೂರ ಅವರಿಗೆ ಪೂರ್ಣ ಪ್ರಮಾಣ ಎಮ್ ಎಲ್ ಸಿ ಮಾಡಿ ಸಚಿವ ಸ್ಥಾನ ನೀಡಬೇಕೆಂದು ತಾಲೂಕಿನ ಮಾಜಿ ಕೋಲಿ ಸಮಾಜದ ಅಧ್ಯಕ್ಷ ಬೀಮರಾವ ಅಳ್ಳೊಳ್ಳಿ ಸೋಮಶೇಖರ್ ಹೊಸ್ಮನಿ ಒತ್ತಾಯಿಸಿದ್ದಾರೆ. ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸೇಡಂ ಕಲ್ಯಾಣ ಕರ್ನಾಟಕ ಕೋಲಿ ಸಮಾಜದ ವತಿಯಿಂದ ರಾಷ್ಟ್ರೀಯ ಅದ್ಯಕ್ಷ ರಾದ ಶ್ರೀ ಮಾನ್ಯ ಮಲ್ಲಿಕಾರ್ಜುನ ಖರ್ಗೆಜಿಯವರಿಗೆ,ನೂತನ ಮುಖ್ಯಮಂತ್ರಿ ಗಳಾದ ಶ್ರೀ ಮಾನ್ಯ ಸಿದ್ದರಾಮಯ್ಯ ನವರಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ, ಕ್ಯಾಬಿನೆಟ್ ಸಚಿವರಾದ ಡಾ ಶರಣಪ್ರಕಾಶ ಪಾಟೀಲ, ಪ್ರಿಯಾ ಖರ್ಗೆಜಿಯವರಿಗೆ ಸೇಡಂ ಕೋಲಿ ಸಮಾಜದ ಮುಖಂಡರು ಮನವಿ ಮಾಡಿ ಒತ್ತಾಯಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ 2023 ವಿಧಾನ ಸಭಾ ಚುನಾವಣೆಯಲ್ಲಿ _7 ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಕೋಲಿ ಸಮಾಜದ ಹಿರಿಯ ಮುಖಂಡ ಹಾಗೂ ವಿಧಾನ ಸಭಾ ಮಾಜಿ ಸದಸ್ಯರಾದ ತಿಪ್ಪಣಪ್ಪ ಕಮಕನೂರ ಅವರ ಪರಿಶ್ರಮ ಬಹಳಷ್ಟು ಆಗಿದೆ ಇವರಿಗೆ ಎಮ್ ಎಲ್ ಸಿ ಮಾಡಿ ಸಚಿವ ಸ್ಥಾನ ನೀಡಿದರೆ ಕಲ್ಯಾಣ ಕರ್ನಾಟಕ ಭಾಗದ ಕೋಲಿ ಸಮಾಜದ ವರಿಗೆ ನ್ಯಾಯ ಒದಗಿಸಿದಂತಾಗುತ್ತದೆ ಮುಂದೆ ಎಸ್ ಟಿ ಸಲುವಾಗಿ ಹೋರಾಟ ಮಾಡಲು ಅನುಕೂಲ ವಾಗತ್ತದೆ.ಅದಲ್ಲದೇ ಮುಂಬರುವ ಲೋಕಸಭಾ ಚುನಾವಣೆ,ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕೋಲಿ ಸಮಾಜ ಬೆಂಬಲಿಸುತ್ತದೆ ಎಂದರು. ಈ ವೇಳೆಯಲ್ಲಿ ಕೋಲಿ ಸಮಾಜದ ಮಾಜಿ ಅದ್ಯಕ್ಷ ಸೋಮಶೇಖರ್ ಹೊಸ್ಮನಿ ಬಿಬ್ಬಳ್ಳಿ, ಪುರಸಭೆ ಸದಸ್ಯ ಸಂತೋಷ ತಳವಾರ ಇದ್ದರು