ಕಬ್ಬು ಹಾಗೂ ತೆಂಗಿನ ಗಿಡಗಳು ಬೆಂಕಿಗೆ ಸುಟ್ಟಿಭಸ್ಮ: ಪರಿಹಾರಕ್ಕೆ ಆಗ್ರಹ

ಸಂಜೆವಾಣಿ ನ್ಯೂಸ್
ಪಾಂಡವಪುರ:ಮಾ.17:- ಅರಣ್ಯ ಪ್ರದೇಶಕ್ಕೆ ಹಾಕಲಾಗಿದ್ದ ಬೆಂಕಿಯ ಕಿಡಿ ತಗುಲಿ ತಾಲೂಕಿನ ರಾಗಿಮುದ್ದನಹಳ್ಳಿ ಹೊರವಲಯದ ಮೂಡನಹಳ್ಳಿ ಎಲ್ಲೆಯಲ್ಲಿ ಬರುವ ಸುನೀತ ಹಾಗೂ ಸಾಕಮ್ಮ ಎಂಬುವರಿಗೆ ಸೇರಿದ ಸುಮಾರು 3 ಎಕರೆ ಪ್ರದೇಶದ ಕಬ್ಬು ಹಾಗೂ 100ಕ್ಕೂ ಹೆಚ್ಚು ತೆಂಗಿನ ಗಿಡಗಳು ಬೆಂಕಿಗೆ ಸುಟ್ಟು ಭಸ್ಮವಾಗಿರುವ ಘಟನೆ ಶನಿವಾರ ನಡೆದಿದೆ.
ಬೇಬಿಬೆಟ್ಟ ಪ್ರದೇಶ ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೆ ಹಾಕಿದ್ದ ಬೆಂಕಿಯ ಹುರಿದುಕೊಂಡು ಅರಣ್ಯ ಪ್ರದೇಶದ ಪಕ್ಕದಲ್ಲಿ ಇದ್ದಂತಹ ರಾಗಿಮುದ್ದ
ನಹಳ್ಳಿ ಗ್ರಾಮದ ನಿವಾಸಿಗಳಾದ ಸುನೀತ ಹಾಗೂ ಸಾಕಮ್ಮ ಎಂಬುವರಿಗೆ ಸೇರಿದ ಸುಮಾರು 3 ಎಕರೆ ಪ್ರದೇಶ ಕಬ್ಬಿನ ಪೈಕಿ ಹಾಗೂ ಕಬ್ಬಿನ ಗದ್ದೆಯ ಒಳಗೆ ಹಾಕಿದ್ದ ಸುಮಾರು 100ಕ್ಕೂ ಹೆಚ್ಚು ತೆಂಗಿನ ಗಿಡಗಳ ಬೆಂಕಿಗೆ ಆಹುತಿಯಾದ್ದು ಲಕ್ಷಾಂತರ ರೂ.ನಷ್ಟ ಉಂಟಾಗಿದೆ.
ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿರುವುದನ್ನು ಕಂಡ ಜಮೀನಿ ಮಾಲೀಕರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬರುವಷ್ಟರಲ್ಲಿ ಬಹುತೇಕ ಕಬ್ಬಿನ ಬೆಳೆ ಹಾಗೂ ತೆಂಗಿನ ಗಿಡಗಳು ಬೆಂಕಿಗೆ ಸುಟ್ಟುಹೋಗಿದೆ. ಘಟನೆಯಿಂದ ರೈತರಿಗೆ ಲಕ್ಷಾಂತರೂ ನಷ್ಟ ಉಂಟಾಗಿದೆ. ನೀರಿಲ್ಲದ ಸಂದರ್ಭದಲ್ಲಿ ಕಷ್ಟಪಟ್ಟು ಬೆಳೆ ಬೆಳೆದಿದ್ದೇವೆ, ಇಂತಹ ಸಂದರ್ಭದಲ್ಲಿ ಬೆಂಕಿ ತಗುಲಿ ಬೆಳೆ ಸುಟ್ಟುಹೋಗಿದ್ದು ನಮಗೆ ಲಕ್ಷಾಂತರೂ ನಷ್ಟ ಉಂಟಾಗಿದೆ. ಹಾಗಾಗಿ ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸರಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡ ಬೇಕೆಂದು ಜಮೀನಿನ ಮಾಲೀಕರಾದ ಸುನೀತ ಹಾಗೂ ಸಾಕಮ್ಮ ಆಗ್ರಹಿಸಿದ್ದಾರೆ.