ಕಬ್ಬು ಗದ್ದೆ ಬೆಂಕಿಗೆ ನಾಶ ರೈತನಿಗೆ ಪರಿಹಾರ ನೀಡಲು ಒತ್ತಾಯ

ಲಿಂಗಸುಗೂರ,ಮಾ.೦೫- ತಾಲೂಕಿನ ಗೊರೇಬಾಳ ತಾಂಡಾದಲ್ಲಿ ಫೆ.೨೬ ರಂದು ಹರಿಶ್ಚಂದ್ರಪ್ಪ ನಾಯ್ಕ್ ಎಂಬ ರೈತನ ಹೊಲದಲ್ಲಿ ೪ ಎಕರೆ ಕಬ್ಬು ಬೆಳೆ ಹಾಕಿದ್ದು, ಬೆಲೆಯು ಕಟಾವು ಮಾಡಲಿಕ್ಕೆ ಬಂದಿದ್ದುs, ಜೋರಾಗಿ ಗಾಳಿ ಬೀಸಿದರಿಂದ ವಿದ್ಯುತ್ ವ್ಯಾರನಿಂದ ಬೆಳೆಗೆ ಸ್ಪಾರ್ಕ್ ಆಗಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವದರಿಂದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಲಿಂಗಸುಗೂರು ತಾಲೂಕು ಅಧ್ಯಕ್ಷ ಅಮರೇಶ ಸರ್ಕಾರ ನೇತೃತ್ವದಲ್ಲಿ ರೈತರು ಸಹಾಯಕ ಅಯುಕ್ತ ಶಿಂಧೆ ಅವಿನಾಶರಿಗೆ ಮನವಿ ಸಲ್ಲಿಸಿದರು.
ರ್‍ಯತ ಹರಿಶ್ಚಂದ್ರಪ್ಪ ನಾಯಕ್ ೪ ಲಕ್ಷ ರೂಪಾಯಿ ಖರ್ಚು ಮಾಡಿ ಕಬ್ಬು ಬೆಳೆ ಬೆಳೆದ್ದಿದು, ಆತನಿಗೆ ೮ ರಿಂದ ೧೦ ಲಕ್ಷ ರೂಪಾಯಿಗಳು ಹಾನಿಯಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ಇಲಾಖೆಯವರು ಆತನ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರವಿಕುಮಾರ ಗೋರೆಬಾಳ,ಶಂಕ್ರಪ್ಪ ನಾಯ್ಕ,ಅಬ್ಬಾಸ ಅಲಿ ಗೋರೆಬಾಳ,ಬಾನು ಚವ್ಹಾನ ಹಾಗೂ ಇತರರು ಇದ್ದರು.