ಮಂಡ್ಯ : ಪಾದಚಾರಿ ಮೇಲೆ ಕಬ್ಬಿನ ಲಾರಿ ಹರಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಗರದ ನೂರಡಿ ರಸ್ತೆಯ ಹೊಸಹಳ್ಳಿ ವೃತ್ತದಲ್ಲಿ ಶನಿವಾರ ನಡೆದಿದೆ.
ಹೊಸಹಳ್ಳಿ ಬಡಾವಣೆಯ ರಾಮಚಂದ್ರ ಅವರ ಮಗ ಸುರೇಶ (50) ಎಂಬಾತನೇ ಮೃತಪಟ್ಟ ದುರ್ದೈವಿ.
ರಾಮಚಂದ್ರ ರಾತ್ರಿ 7.30ರ ಸಮಯದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಬ್ಬು ತುಂಬಿದ ಲಾರಿ ಹರಿದು ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದಾನೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ನಗರದ ಮಿಮ್ಸ್ ಶವಾಗಾರಕ್ಕೆ ಸಾಗಿಸಿದ್ದಾರೆ. ಸಂಚಾರಿ ಠಾಣೆ ಪಿಎಸ್‌ಐ ಸಾಹೇಬ್‌ಗೌಡ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.