ಕಬ್ಬಿನ ಬೆಳೆಗೆ ಬೆಂಕಿ ಅಪಾರ ಹಾನಿ

ಕೆಂಭಾವಿ:ನ.19:ಸಮೀಪದ ಹೆಗ್ಗಣದೊಡ್ಡಿ ಗ್ರಾಮದಲ್ಲಿ ಎರಡು ಎಕರೆ ಜಮೀನಿನಲ್ಲಿ ಬೆಳೆದ ಕಬ್ಬಿನ ಬೆಳೆಗೆ ಆಕಸ್ಮಿಕ ಬೆಂಕಿ ತಗುಲಿ ರೈತ ಮಹಿಳೆ ಅಪಾರ ನಷ್ಟ ಅನುಭವಿಸಿದ ಘಟನೆ ಶುಕ್ರವಾರ ಸಾಯಂಕಾಲ ಜರುಗಿದೆ.

ರೈತ ಮಹಿಳೆ ಪರಮವ್ವ ಗಂಡ ಚಂದಪ್ಪ ವಡಿಗೇರಿ ಎಂಬುವವರಿಗೆ ಸೇರಿದ ಗ್ರಾಮದ ಸರ್ವೆ ನಂ 7 ರ ಜಮೀನು ಇದಾಗಿದ್ದು, ಬೆಳೆಗೆ ಆಕಸ್ಮಿಕ ಬೆಂಕಿ ತಗುಲಿದ ಹಿನ್ನೆಲೆ, ಬೆಳೆ ಬಹುಪಾಲು ಸುಟ್ಟು ಭಸ್ಮವಾಗಿದೆ. ಇದ್ದ ಎರಡೇ ಎಕರೆ ಹೊಲಕ್ಕೆ ಸಾಲ ಶೂಲ ಮಾಡಿ ಕಬ್ಬು ನಾಟಿ ಮಾಡಿದ್ದೆ, ಬೆಳೆದ ಬೆಳೆ ಇನ್ನೇನು ಕಟಾವಿಗೆ ಬಂದಿತ್ತು. ಆಕಸ್ಮಿಕ ಬೆಂಕಿ ತಗುಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂಗಾಯ್ತು ಎಂದು ರೈತ ಮಹಿಳೆ ತಮ್ಮ ಅಳಲನ್ನು ತೋಡಿಕೊಂಡರು. ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ.