ಕಬ್ಬಿನ ಟ್ರ್ಯಾಕ್ಟರ್ ಬೈಕ್ ನಡುವೆ ಡಿಕ್ಕಿ,ಬೈಕ್ ಸವಾರ ಸಾವು, ಮಗನ ಸಾವಿನ ಸುದ್ದಿ ಕೇಳಿ ತಂದೆ ಆತ್ಮಹತ್ಯೆ

ಶಹಪುರ :ಮಾ.5:ತಾಲೂಕಿನ ಮದ್ದರಕಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಕ್ರಾಸ್ ಬಳಿ ರಾತ್ರಿ 9:00 ಘಂಟೆ ಸುಮಾರಿಗೆ ಕಬ್ಬಿನ ಟ್ರ್ಯಾಕ್ಟರ್ ಗೆ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಶಿವು ಸುಮಣ್ಣನಿಗೆ ತಿವ್ರಗಾಯವಾದ ಪರಿಣಾಮ ಕಲಬುರ್ಗಿಗೆ ಹೋಗುವ ಮಾರ್ಗಮಧ್ಯೆದಲ್ಲಿ ಸಾವನ್ನಪ್ಪಿದ್ದಾನೆ. ತನ್ನ ಮಗನ ಸಾವಿನ ಸುದ್ದಿ ತಿಳಿದ ಶಿವು ಸುಮಣ್ಣನ ತಂದೆ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಗ್ರಾಮದ ಬಾಯೊಂದರಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡ ಘೋರ ಘಟನೆ ಮದ್ದರಕಿ ಗ್ರಾಮದಲ್ಲಿ ನಡೆದಿದೆ.ಒಂದೆ ದಿನದಲ್ಲಿ ತಂದೆ ಮತ್ತು ಮಗನ ಸಾವಾಗಿರುವುದು ದುರಂತ.ಭೀ,ಗುಡಿ ಪೆÇೀಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.