
ಕಲಬುರಗಿ,ನ.20-ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದಾಗಿ ಕಬ್ಬಿನ ಗದ್ದಗೆ ಬೆಂಕಿ ಬಿದ್ದು, ಸುಮಾರು 2 ಲಕ್ಷ ರೂ.ಮೊತ್ತದ ಕಬ್ಬು ಸುಟ್ಟು ಕರಕಲಾದ ಘಟನೆ ಇಲ್ಲಿಗೆ ಸಮೀಪದ ಕಡಣಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಕಡಣಿ ಗ್ರಾಮದ ರೈತ ಹಣಮಂತರಾಯ ಗುರುಲಿಂಗಪ್ಪ ಅವರ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿದೆ. 3.5 ಎಕರೆ ಜಮೀನಿನಲ್ಲಿ ಅವರು 5 ಲಕ್ಷ ರೂ.ಮೊತ್ತದ ಕಬ್ಬು ಬೆಳೆದಿದ್ದರು. ನಿನ್ನೆ ಮಧ್ಯಾಹ್ನ ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದಾಗಿ ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿಕೊಂಡು 2 ಲಕ್ಷ ರೂ.ಬೆಲೆ ಬಾಳುವ ಕಬ್ಬು ಸುಟ್ಟು ಹೋಗಿದೆ.
ಸುದ್ದಿ ತಿಳಿದು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವುದರ ಮೂಲಕ ಹೆಚ್ಚಿನ ಹಾನಿಯನ್ನು ತಡೆದಿದ್ದಾರೆ. ಈ ಸಂಬಂಧ ಅಗ್ನಿಶಾಮಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..