ಕಬ್ಬಿನ ಗದ್ದೆಗೆ ಬೆಂಕಿ ತಗಲಿ ಹಾನಿ

ಆಳಂದ: ನ.23:ತಾಲೂಕಿನ ಜವಳಿ(ಡಿ) ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಐದು ಎಕರೆ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಸುಮಾರು 180 ಟನ್ ಕಬ್ಬು ಬೆಂಕಿಯಿಂದ ಸುಟ್ಟು ಕರಕಲ್ಲಾದ ಘಟನೆ ಸೋಮವಾರ ವರದಿಯಾಗಿದೆ.

ಗ್ರಾಮದ ರೈತ ಪ್ರಭುಲಿಂಗ ಶಂಕರರಾವ ತೆಲ್ಲೂರು ಹಾಗೂ ಶಿವಾನಂದ ರಾಮಚಂದ್ರ ತೆಲ್ಲೂರು ಎಂಬ ರೈತರ ತಲಾ 2.5 ಎಕರೆ ಗದ್ದೆಯಲ್ಲಿನ ಕಟಾವಿಗೆ ಬಂದ ಕಬ್ಬು ಬೆಂಕಿಗಾಹುತಿಯಾಗಿದೆ.

ಕಬ್ಬಿನ ಗದ್ದೆಯ ಮೇಲಿಂದ ವಿದ್ಯುತ್ ತಂತಿ ಹಾದು ಹೋಗಿದ್ದು, ತಂತಿಗಳು ಪರಸ್ಪರ, ಕಿಡಿ ಹಾರಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿದೆ. ಘಟನೆ ಅರಿತು ಸುತ್ತ ಮುತ್ತಲಿನ ರೈತರು ದಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಆಳಂದದಿಂದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪಂಚನಾಮೆ ನಡೆಸಿ ಹಾನಿಯ ಕುರಿತು ದಾಖಲಿಸಿದ್ದಾರೆ. ಈ ಕುರಿತು ನಿಂಬರ್ಗಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.