ಕಬ್ಬಿಣದ ಅದಿರು ಅಮದು: ರಾಜ್ಯದ ಬೇಡಿಕೆ ಮೇಲೆ ಪರಿಣಾಮ


ಬೆಂಗಳೂರು,ಮಾ.೨೦- ದೇಶದ ಪೂರ್ವ ವಲಯದಿಂದ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣದ ಅದಿರನ್ನು ರಾಜ್ಯಕ್ಕೆ ಆಮದು ಮಾಡಿಕೊಳ್ಳುವುದರಿಂದ ಕಬ್ಬಿಣದ ಅದಿರಿನ ಬೇಡಿಕೆ ಮೇಲೆ ತೀವ್ರ ಪರಿಣಾಮ ಬೀರಿದೆ.
ರಾಜ್ಯದಕ್ಕೆ ಕಳೆದ ಐದು ತಿಂಗಳಲ್ಲಿ ಇತರ ರಾಜ್ಯಗಳಿಂದ ೧೯ ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಆಮದು ಮಾಡಿಕೊಳ್ಳಲಾಗಿದ್ದು, ಇದು ಭಾರಿ ಆದಾಯ ನಷ್ಟಕ್ಕೆಕಾರಣವಾಗಿದೆ ಮತ್ತು ರಾಜ್ಯದಲ್ಲಿ ಉದ್ಯೋಗಾವಕಾಶಗಳಿಗೂ ಹೊಡೆತ ನೀಡಿದೆ.ದೂರದಿಂದ ಕಬ್ಬಿಣದ ಅದಿರಿನ ಅಂತರರಾಜ್ಯ ಸಾಗಣೆ ಪರಿಸರ ಸ್ನೇಹಿಯಲ್ಲದ ಕ್ರಮವಾಗಿದೆ ಮತ್ತು ಇಂಗಾಲದ ನಕಾರಾತ್ಮಕ ಪರಿಣಾಮ ಉಂಟುಮಾಡಿದೆ ಎಂದು ಭಾರತೀಯ ಖನಿಜ ಕೈಗಾರಿಕೆಗಳ ಒಕ್ಕೂಟ (ಎಫ್‌ಐಎಂಐ) ಹೇಳಿದೆ.ರಾಜ್ಯದ ಬೇಡಿಕೆ ಪೂರೈಸುವಷ್ಟು ಖನಿಜ ಲಭ್ಯವಿದ್ದರೂ ಕಬ್ಬಿಣದ ಅದಿರಿನ ಆಮದು ಹೆಚ್ಚುತ್ತಿರುವ ಕಾರಣ ರಾಜ್ಯದಲ್ಲಿ ಉದ್ಯೋಗ, ಆದಾಯ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಮೇಲಿನ ಪರಿಣಾಮಗಳ ಬಗ್ಗೆ ಎಫ್‌ಐಎಂಐ ಗಂಭೀರ ಕಳವಳ ವ್ಯಕ್ತಪಡಿಸಿದೆ.ಕರ್ನಾಟಕದಲ್ಲಿ ಕಬ್ಬಿಣದ ಅದಿರಿನ ವ್ಯಾಪಾರದ ಮೇಲಿನ ಏಕಕಾಲಿಕ ನಿರ್ಬಂಧಗಳು ಈ ಕ್ಷೇತ್ರದ ಬೆಳವಣಿಗೆಯನ್ನು ನಿಗ್ರಹಿಸುತ್ತಿವೆ ಹಾಗೂ ಉದ್ಯಮ ಮತ್ತು ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟವನ್ನು ಉಂಟುಮಾಡುತ್ತಿವೆ.
ಕಬ್ಬಿಣದ ಅದಿರಿನ ವ್ಯಾಪಾರದ ಮೇಲಿನ ನಿರ್ಬಂಧಗಳು ಈ ಕ್ಷೇತ್ರದ ಬೆಳವಣಿಗೆಯನ್ನು ನಿಗ್ರಹಿಸುತ್ತಿವೆ ಮತ್ತು ಉದ್ಯಮ ಹಾಗೂ ಸಾರ್ವಜನಿಕ ವೆಚ್ಚದ ಮೇಲೆ ಗಮನಾರ್ಹ ಹಾನಿಕಾರಕ ಪರಿಣಾಮ ಬೀರಿದೆ.