ಕಬ್ಬಳ ಗ್ರಾಮ ಪಂಚಾಯಿತಿ: ನರೇಗಾ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ

ದಾವಣಗೆರೆ ಜು.16; ಚನ್ನಗಿರಿ ತಾಲ್ಲೂಕು ಕಬ್ಬಳ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ  2022-23ನೇ ಸಾಲಿನ ಪ್ರಥಮ ಹಂತದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ 14 ಮತ್ತು 15 ನೇ ಹಣಕಾಸು ಯೋಜನೆಯ “ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆ” ನಡೆಸಲಾಯಿತು.  
ಜಿ.ಪಂ ಸಾಮಾಜಿಕ ಪರಿಶೋಧನೆ ಜಿಲ್ಲಾ ಸಂಯೋಜಕ  ಜಯಪ್ರಕಾಶ್  ಸಭೆಯಲ್ಲಿ ಮಾತನಾಡಿ, ಉದ್ಯೋಗ ಖಾತರಿ ಯೋಜನೆ, 14ನೇ ಮತ್ತು 15ನೇ ಹಣಕಾಸು ಯೋಜನೆಗೆ ಕೇಂದ್ರ ಸರಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಈ ಯೋಜನೆಯಡಿ ಹೆಚ್ಚಿನ ಅನುದಾನವೂ ಸಿಗುತ್ತದೆ. ಉದ್ಯೋಗ ಖಾತರಿ ಯೋಜನೆಯಡಿ ವೈಯಕ್ತಿಕ ಜಾಗದಲ್ಲಿ ಹಾಗೂ ಸಮುದಾಯ ಅಭಿವೃದ್ಧಿ ಕೆಲಸ ಮಾಡಬಹುದಾಗಿದೆ. ಗ್ರಾಮಸ್ಥರು ಯೋಜನೆಯ ಕುರಿತಂತೆ ಗ್ರಾಮ ಪಂಚಾಯಿತಿಯಿಂದ ಸಮಗ್ರ ಮಾಹಿತಿ ಪಡೆದುಕೊಂಡು ಅನುμÁ್ಠನಗೊಳಿಸಬೇಕು. ಈ ಯೋಜನೆಯಿಂದ ತಮ್ಮ ವೈಯಕ್ತಿಕ ಅಭಿವೃದ್ಧಿಯೂ ಆಗಲಿದೆ ಎಂದರು.ಅಡಿಕೆ ಗಿಡ, ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಅಡಿಕೆ ಪುನಶ್ಚತಕ್ಕೂ ಅವಕಾಶವಿದೆ.  ಅಡಿಕೆ ಗಿಡ ನಾಟಿಗೂ ಉದ್ಯೋಗ ಖಾತರಿ ಯೋಜನೆಯಡಿ ಅನುದಾನ ಸಿಗಲಿದೆ ಎಂದು ಹೇಳಿದ ಅವರು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.
ನಂತರ ಗ್ರಾಮದಲ್ಲಿ ಆಗಿರುವ ಕಾಮಗಾರಿಗಳ ಬಗ್ಗೆ ಪರಿಶೀಲಿಸಿದ ಅವರು 14ನೇ ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಒಟ್ಟು 81 ಲಕ್ಷ ರೂ. ಅನುದಾನ ಬಂದಿದ್ದು ಅದರಲ್ಲಿ 56 ಲಕ್ಷ ರೂ. ಕಾಮಗಾರಿ ಆಗಿವೆ ಅದರಲ್ಲಿ 19,55,017 ರೂ. ಅನುದಾನವು ಸೂಕ್ತ ದಾಖಲೆಗಳಿದ್ದ ಕಾರಣ ಅನುಮೋದನೆಗೋಳ್ಳದೆ  ಸ್ಥಗಿತಗೊಂಡಿದೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಗ್ರಾಮಸ್ಥರೂ ಪ್ರತಿಕ್ರಿಯಿಸಿ ಗ್ರಾಮದಲ್ಲಿ ಈವರೆಗೆ ಆಗಿರುವ ಎಲ್ಲಾ ಕಾಮಗಾರಿಗಳು ಕಳಪೆ ಗುಣಮಟ್ಟದಾಗಿದೆÉ ಎಂದು ಅಧಿಕಾರಿಗಳಿಗೆ ದೂರಿದರು.
ಸಾ.ಪ ಜಿಲ್ಲಾ ಸಂಯೋಜಕ  ಜಯಪ್ರಕಾಶ್  ಪ್ರತಿಕ್ರಿಯಿಸಿ ಆದಷ್ಟು ಬೇಗ ಈವರೆಗೆ ಆಗಿರುವ ಕಾಮಗಾರಿಗಳನ್ನು ಪರಿಶೀಲಿಸಿ ನಂತರ ಹಣ ಬಿಡುಗಡೆ ಮಾಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸಂತೋμï ನಾಯ್ಕ್ ಮಾತನಾಡಿ, 15ನೇ ಹಣಕಾಸು ಯೋಜನೆಯಲ್ಲಿ ವಿಕಲಚೇತನರಿಗೆ ಸೋಲಾರ್ ಕಿಟ್ ವಿತರಣೆ ಮಾಡಿದ್ದು, ಅರ್ಹ ಫಲಾನುಭವಿಗಳಿಗೆ ಮಂಜೂರು ಮಾಡದೆ ಅದರಲ್ಲಿ ಅವ್ಯವಹಾರಗಳು ನಡೆದಿದೆ ಎಂದು ಅಧಿಕಾರಿಗಳ ಗಮನಕ್ಕೆ ತಂದರು.
ಗ್ರಾಮದ ಮುಖಂಡ ಕಿರಣ್ ನಾಯ್ಕ್ ಮಾತನಾಡಿ, ಗ್ರಾಮ ಸಭೆಯನ್ನು ಗ್ರಾಮಸ್ಥರನ್ನು ಕರೆಸಿ ದೊಡ್ಡ ಸಭಾಂಗಣದಲ್ಲಿ ನಡೆಸಬೇಕು. ಗ್ರಾಮದಲ್ಲಿರುವ ಸೇವಾಲಾಲ್ ಭವನನ್ನು ಇತರೆ ಖಾಸಗಿ ಸಂಸ್ಥೆಯವರು ಬಳಸಿಕೊಳ್ಳುತ್ತಿದ್ದು ಅದನ್ನು ಗ್ರಾಮ ಸಭೆ ಸಮಾರಂಭಗಳಿಗೆ ಅನೂಕೂಲವಾಗುವಂತೆ ಸದ್ಬಳಕೆ ಮಾಡಿಕೊಳ್ಳಿ ಎಂದು ಗ್ರಾಪಂ ಅಧಿಕಾರಿಗಳಿಗೆ ಸೂಚಿದರು..
ಗ್ರಾಮದ ಯುವಕ ಲೋಹಿತ್ ಕುಮಾರ್ ಮಾತನಾಡಿ, ಗ್ರಾಮದಲ್ಲಿ ಸುವ್ಯವಸ್ಥಿತ ಗ್ರಂಥಾಲಯವಿಲ್ಲ, ಗುಣಮಟ್ಟದ ಪುಸ್ತಕಗಳು ಲಭ್ಯವಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿನಡೆಸಲು ತುರ್ತಾಗಿ ಗ್ರಂಥಾಲಯ ಬೇಕಿದೆ ಈ ಕುರಿತು ಗಂಭೀರವಾಗಿ ಪರಿಗಣಿಸಿ ಗ್ರಾಮದಲ್ಲಿ ವ್ಯವಸ್ಥಿತ ಗ್ರಂಥಾಲಯ ಸ್ಥಾಪಿಸಿ ಎಂದು ಬೇಡಿಕೆ ಸಲ್ಲಿಸಿದರು.

ಗ್ರಾ.ಪಂ.ಅಧ್ಯಕ್ಷೆ ಎನ್.ಜೆ ರೇಣುಕಮ್ಮ, ಉಪಾಧ್ಯಕ್ಷೆ ವೆಂಕಟಲಕ್ಷ್ಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೀರಿನ್ ತಾಜ್, ಸಾ.ಪ.ತಾಲ್ಲೂಕು ಸಂಯೋಜಕ ರಮೇಶ್ ಕೆ ಎಮ್, ತಾ.ಪಂ ಸಹಾಯಕ ತೋಟಗಾರಿಕಾ ಅಧಿಕಾರಿಗಳು  ಯಶವಂತ್, ತಾ.ಪಂ ತಾಂತ್ರಿಕ ಸಹಾಯಕ ಸುರೇಶ್, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಸಿಬ್ಬಂದಿಗಳು ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

Attachments area