
ಬೆಂಗಳೂರು,ಏ.೧೩- ಕಬ್ಬನ್ ಪಾರ್ಕ್‌ನಲ್ಲಿ ಕಾಲ ಕಳೆಯಲು ಬರುವ ಪ್ರೇಮಿಗಳ ಸುರಕ್ಷತೆ ಕಾಪಾಡಲು ಹೊಸ ನಿಯಮ ಜಾರಿಗೆ ತಂದಿದೆ. ಇದರಿಂದ ಪ್ರೇಮಿಗಳು ಏಕಾಂತದಲ್ಲಿ ಕಾಲ ಕಳೆಯಲು ಅನುಕೂಲ ಕಲ್ಪಿಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಹೀಗಾಗಿ ಉದ್ಯಾನವನಕ್ಕೆ ಆಹಾರ ತೆಗೆದುಕೊಂಡು ಹೋಗುವಂತಿಲ್ಲ. ಜೊತೆಗೆ ಆಟಗಳೂ ಇಲ್ಲ. ಇದರಿಂದ ಪ್ರೇಮಿಗಳು ಮತ್ತಷ್ಟು ಮುಕ್ತ ವಾತಾರವರಣದಲ್ಲಿ ಕಾಲಕಳೆಯಲು ಅವಕಾಶ ಮಾಡಿಕೊಟ್ಟಂತಾಗಿದೆ.
ಅತ್ಯಂತ ಪ್ರಿಯವಾದ ಜಾಗಕ್ಕೆ ಭೇಟಿ ನೀಡುವವರಿಗೆ ಹೊಸ ನಿಷೇಧವನ್ನು ಜಾರಿಗೆ ತರಲಾಗಿದೆ. ಪ್ರೇಮಿಗಳು ಪರಸ್ಪರ ಹತ್ತಿರವಾಗುವಂತಿಲ್ಲ, ಆಹಾರವನ್ನು ತರುವಂತಿಲ್ಲ. ಫೋಟೋಗಳು ಮತ್ತು ವೀಡಿಯೊಗಳನ್ನು ನಿಷೇಧಿಸಲಾಗಿದೆ.
ಈಗ ಒಂದು ತಿಂಗಳಿನಿಂದ, ಭದ್ರತಾ ಸಿಬ್ಬಂದಿ ೩೦೦ ಎಕರೆ ಉದ್ಯಾನದಲ್ಲಿ ಗಸ್ತು ತಿರುಗುತ್ತಿದ್ದಾರೆ ಮತ್ತು ಈ ನಿಯಮಗಳನ್ನು ಉಲ್ಲಂಘಿಸುತ್ತಿರುವ ಮಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ.ಇದಕ್ಕಾಗಿ ಧ್ವನಿವರ್ಧಕಗಳ ಮೂಲಕ ಸೂಚನೆ ನೀಡುತ್ತಿದ್ದಾರೆ.
ಕೆಲವು ಚಟುವಟಿಕೆಗಳಿಂದ ಮಕ್ಕಳಿಗೆ ಉದ್ಯಾನದ ವಾತಾವರಣ ಸೂಕ್ತವಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್‌ಗೆ ಭೇಟಿ ನೀಡುವವರು ಉದ್ಯಾನವನದ ವಾತಾವರಣವನ್ನು ಹಾಳು ಮಾಡದಂತೆ ಭದ್ರತಾ ಸಿಬ್ಬಂದಿಗೆ ಮೌಖಿಕ ಸೂಚನೆಗಳನ್ನು ನೀಡಲಾಗಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಪ್ರತಿಕ್ರಿಯೆ ನೀಡಿ ಈ ಸಂಬಂದ ಹಲವು ಕುಟುಂಬಗಳಿಂದ ದೂರುಗಳನ್ನು ಸ್ವೀಕರಿಸುತ್ತಿದ್ದೇವೆ . ಕೆಲವು ದಂಪತಿಗಳ ಪ್ರೀತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಬಗ್ಗೆಯೂ ಕೂಡ ದೂರ ಬಂದಿವೆ ಎಂದಿದ್ದಾರೆ.
ಪ್ರೇಮಿಗಳ ಸುರಕ್ಷತೆಗಾಗಿ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ.
ಧ್ವನಿವರ್ಧಕಗಳು ಪ್ರೇಮಿಗಳಿಗೆ ಯಾವುದೇ ತೊಂದರೆ ನೀಡುವುದಿಲ್ಲ ಆದರೆ ನಿಯಮಗಳನ್ನು ಉಲ್ಲಂಘಿಸುವ ಮತ್ತು ಉದ್ಯಾನವನ್ನು ಹಾಳು ಮಾಡುವವರಿಗೆ ಮಾತ್ರ ಸೂಚನೆ ನೀಡಲಾಗುತ್ತಿದೆ.