ಕಬ್ಬಡ್ಡಿ ತಂಡಕ್ಕೆ ಆಯ್ಕೆ

ಬ್ಯಾಡಗಿ, ಜು 18: ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್‍ನ ಇಬ್ಬರು ಉದಯೋನ್ಮುಖ ಕಬಡ್ಡಿ ಕ್ರೀಡಾಪಟುಗಳು ಮೂಡಬಿದರೆಯ ಆಳ್ವಾಸ್ ಕಾಲೇಜು ಕಬಡ್ಡಿ ತಂಡಕ್ಕೆ ಕ್ರೀಡಾ ಕೋಟಾದಡಿ ಆಯ್ಕೆಯಾಗಿದ್ದಾರೆ.

ರಾಷ್ಟ್ರಮಟ್ಟದ ಆಟಗಾರ್ತಿಯಾಗಿರುವ ಬ್ಯಾಡಗಿ ಪಟ್ಟಣದ ರಚನಾ ಸಣ್ಣಕ್ಕಿ ಹಾಗೂ ತಾಲೂಕಿನ ಹಿರೇಹಳ್ಳಿ ಗ್ರಾಮದ ಹರೀಶ್ ದಿಡಗೂರು ಆಯ್ಕೆಯಾದ ಕ್ರೀಡಾಪಟುಗಳಾಗಿದ್ದಾರೆ. ಪುರುಷರ ತಂಡಕ್ಕೆ ಆಯ್ಕೆಯಾದ ಹರೀಶ್ ಮತ್ತು ಮಹಿಳಾ ವಿಭಾಗಕ್ಕೆ ಆಯ್ಕೆಯಾದ ರಚನಾ ಸಣ್ಣಕ್ಕಿ ಅವರಿಗೆ ಕೋಚ್ ಮಂಜುಳಾ ಭಜಂತ್ರಿ ತರಬೇತಿ ನೀಡಿದ್ದರು.

ಕ್ರೀಡಾಪಟುಗಳಿಗೆ ತಾಲೂಕಾ ಯುವಜನ ಸೇವಾ ಕ್ರೀಡಾಧಿಕಾರಿ ಎಚ್.ಬಿ.ದಾಸರ ಸೇರಿದಂತೆ, ಜಿಲ್ಲಾ ಅಸೋಸಿಯೇಶನ್ ಅಧ್ಯಕ್ಷ ಮಂಜಣ್ಣ ಎಲಿ, ಕಾರ್ಯದರ್ಶಿ ಶಿವಾನಂದ ಮಲ್ಲನಗೌಡರ, ಖಜಾಂಚಿ ಗಂಗಾಧರ ಎಲಿ, ಸದಸ್ಯರಾದ ಪ್ರಕಾಶ ಹಾವೇರಿ, ಮಲ್ಲಿಕಾರ್ಜುನ ಬಳ್ಳಾರಿ, ಮಲ್ಲಿಕಾರ್ಜುನ ಅಂಗಡಿ, ಮಾರುತಿ ಜನ್ನು, ಎಂ.ಆರ್.ಕೋಡಿಹಳ್ಳಿ, ಎ.ಟಿ.ಪೀಠದ, ನಂದೀಶ್ ದಳವಾಯಿ, ವಿಜಯ ಮಾಳಗಿ, ಕಿರಣ್ ಕಂಬಳಿ, ಪಾರ್ವತಿ ಕುರುವತ್ತೇರ, ತೀರ್ಪುಗಾರರ ಮಂಡಳಿ ಛೇರಮನ್ ಸಿ.ಜಿ.ಚಕ್ರಸಾಲಿ, ಸದಸ್ಯರಾದ ಎಂ.ಕೆ.ಹೊಸಮನಿ, ಬಿ.ಸಿ.ದಾಣ್ಗಲ್, ಮಾರುತಿ ಚೌಹಾಣ, ಎ.ಬಿ.ಕಲ್ಮನಿ, ಜಿನ್ನಾ ಹಲಗೇರಿ ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ.