ಕಬ್ಬಡ್ಡಿ,ವಾಲಿಬಾಲ್-ತಾಲೂಕು ಮಟ್ಟಕ್ಕೆ ಸರ್ಕಾರಿ ಶಾಲೆ

ಕೋಲಾರ, ಜು. ೨೩:ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಹುತ್ತೂರು ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ತಾಲೂಕಿನ ಶಾಪೂರು ಸರ್ಕಾರಿ ಪ್ರೌಢಶಾಲೆಯ ಬಾಲಕಿಯರು ಕಬಡ್ಡಿ ಮತ್ತು ವಾಲಿಬಾಲ್ ತಂಡದಲ್ಲಿ ವಿಜೇತರಾಗಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತರಾದ ಎಲ್ಲ ವಿದ್ಯಾರ್ಥಿನಿಯರಿಗೆ, ಕ್ರೀಡಾಕೂಟದ ಉಸ್ತುವಾರಿ ಶಿಕ್ಷಕಿಯರಾದ ಶ್ರೀಮತಿ ಪದ್ಮಾವತಿ ಮೇಡಂ ರವರಿಗೆ ಹಾಗೂ ಕ್ರೀಡಾಪಟುಗಳಿಗೆ ಹಾಗೂ ತರಬೇತಿ ನೀಡಿದ ಶಾಪೂರಿನ ಹಳೆಯ ವಿದ್ಯಾರ್ಥಿಗಳಾದ ಯಾರಂಘಟ್ಟ ಗಿರೀಶ್ ಶ್ರೀನಿವಾಸ್, ಭೂಪತಿ, ಪ್ರತಾಪ್ ಹಾಗೂ ಜಬೀ ಉಲ್ಲಾರವರಿಗೆ ಶಾಲಾ ಮುಖ್ಯೋಪಾಧ್ಯಾಯ ಎಸ್.ಚಂದ್ರ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.