ಕಬ್ಬಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ; ಶಾಸಕರಿಂದ ಅಭಿನಂದನೆ

ಸಂಜೆವಾಣಿ ವಾರ್ತೆ

ಜಗಳೂರು.ಸೆ.೧೩; ಪಟ್ಟಣದ ಬೇಡರಕಣ್ಣಪ್ಪ ಶಾಲಾಆವರಣ ದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ದೈಹಿಕ ಶಿಕ್ಷಕರ ಸಂಘಗಳ ವತಿಯಿಂದ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮರೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಬಾಲಕರ ಕಬ್ಬಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದ ಮಕ್ಕಳಿಗೆ ಶಾಸಕರಾದ ಬಿ.ದೇವೇಂದ್ರಪ್ಪ ಮತ್ತು ಕೆಪಿಸಿಸಿ ಎಸ.ಟಿ ಘಟಕದ ರಾಜ್ಯದ್ಯಕ್ಷರಾದ ಕೆ.ಪಿ ಪಾಲಯ್ಯ ಮತ್ತು ಊರಿನ ಕ್ರೀಡಾ ಅಭಿಮಾನಿಗಳಿಂದ ಶಾಸಕರ ಕಚೇರಿ ಮತ್ತು ಪ್ರವಾಸಿ ಮಂದಿರದಲ್ಲಿ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದರುಇದೇ ವೇಳೆ ಮುಖ್ಯ ಶಿಕ್ಷಕರಾದ ಫ್ಯಾರಿಮಾ ಬೇಗo. ಶರಣಪ್ಪ.ಗ್ರಾಮದ ಮುಖಂಡರಾದ ಡಿ.ಪಿ ಜಗಳೂರಯ್ಯ. ಮಾಜಿ ಗ್ರಾಮ ಪಂಚಾಯತಿ ಸದಸ್ಯ ಜಿ.ಟಿ ನಾಗರಾಜ್. ಗ್ರಾ.ಪಂ ಸದಸ್ಯರಾದ ಶ್ವೇತಾ ಬಸರಾಜ್.ಕೆ ತಿಪ್ಪೇಸ್ವಾಮಿ. ಸಿದ್ದಪ್ಪ.ನಿವೃತ ಸಮಾಜ ಕಲ್ಯಾಣ ಅಧಿಕಾರಿ,ಬಿ ಮಹೇಶ್ವರಪ್ಪ.ಪ.ಪಂ ಸದಸ್ಯರಾದ ರಮೇಶ್ ರೆಡ್ಡಿ. ಮುಖಂಡರಾದ ಆದರ್ಶ.ರಂಗನಾಥ್ ರೆಡ್ಡಿ. ಮಾಳಮ್ಮನಹಳ್ಳಿ ವೆಂಕಟೇಶ್.ಅಮದ್ ಅಲಿ.ಅನ್ವರ್. ಕುಮಾರ್ ನಾಯ್ಕ್. ತಿಪ್ಪೇಸ್ವಾಮಿ.ಗ್ರಾಮದ ಕ್ರೀಡಾಭಿಮಾನಿಗಳಾದ ರಾಜು.ಪಾಲೇಶ್.ಬೊಮ್ಮಲಿಂಗಪ್ಪ. ದೇವರಾಜ್. ರಘು.ಸೇರಿದಂತೆ ಮರೇನಹಳ್ಳಿ ಗ್ರಾಮದ ಸಮಸ್ತ ಯುವಕರು ಇದ್ದರು.