ಕಬ್ಬಡಿ ಆಟದಿಂದ ದೈಹಿಕ ಸಾಮರ್ಥ್ಯ ಹೆಚ್ಚಳ

ಸಿರವಾರ.ಜ೨೯- ಯುವಕರು ಮದ್ಯಪಾನ ದೂಮಪಾನ,ಮೊಬೈಲ್ ನಲ್ಲಿ ಆಟಗಳಿಗೆ ದಾಸರಾಗಿರದೆ ಕ್ರೀಡೆಗಳಲ್ಲಿ ತಮ್ಮನು ತಾವು ತೊಡಗಿಸಿಕೊಂಡು ಚಟುವಟಿಕೆಯಿಂದ ಇರಬೇಕು ಎಂದು ಬಿಜೆಪಿ ಮಾನ್ವಿ ಮಂಡಲ ಅದ್ಯಕ್ಷ ಹಾಗೂ ಕೆ.ಶಿ.ಎನ್ ಅಭಿಮಾನಿ ಬಳಗದ ಅದ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ ಯುವಕರಿಗೆ ಕಿವಿ ಮಾತುಹೇಳಿದರು.
ತಾಲೂಕಿನ ಬಾಗಲವಾಡ ಗ್ರಾಮದ ದಿ.ಶ್ರೀ ಶಿವಕುಮಾರ ಗೌಡ ಮಾ.ಪಾ ಸವಿ ನೆನಪಿಗಾಗಿ ಜೋಡಿ ಬಾವಿ ಯುವ ಬಳಗ ವತಿಯಿಂದ ಹಮ್ಮಿಕೊಂಡಿದ ಮ್ಯಾಟ್ ಕಬ್ಬಡಿ ಪಂದ್ಯಾವಳಿ ಚಾಲನೆ ನೀಡಿ ಮಾತನಾಡಿದ ಅವತು ಯುವಕರು ಚಟಗಳಿಗೆ ದಾಸರಾಗಿ ಜೀವನವನ್ನು ಹಾಳು ಮಾಡಿಕೊಳದೆ ಇಂತಹ ಕ್ರೀಡೆಗಳಲ್ಲಿ ಭಾಗಹಿಸಿ ಚಟುವಟಿಕೆಗಳಿಂದ ಇದಾಗ ಯಾವುದೇ ರೋಗಗಳು ನಿಮ್ಮ ಬಳಿ ಸುಳಿಯುವುದಿಲ. ಸೋಲು ಗೆಲುವು ಎಂದು ತಲೆಕೆಡೆಸಿಕೊಳದೆ ಕ್ರೀಡೆಗಳಲ್ಲಿ ಭಾಗವಹಿಸಿ, ಕ್ರೀಡೆಗಳಲ್ಲಿ ಪಾಲ್ಗೊಳುವುದರಿಂದ ಮಾನಸಿಕವಾಗಿ, ದೈಹಿಕವಾಗಿ ಸದೃಡರಾಗುತ್ತಾರೆ. ಒಂದಿಲಾ ಒಂದು ಕ್ರೀಡೆಯಲ್ಲಿ ಯುವಕರು ತಮ್ಮನು ತಾವು ತೊಡಗಿಸಿಕೊಳಬೇಕು. ಯುವಕರು ಇಂತಹ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಅನೋನ್ಯತ್ಯ, ಭಾಂದವ್ಯ ಬೆಳೆಯುತ್ತದೆ. ದುಶ್ಚಟಗಳಿಂದ ದೂರ ಇರಿ ಇಂತಹ ಕ್ರೀಡೆಗಳಲ್ಲಿ ಪಾಲ್ಗೊಳಬೇಕು ಎಂದರು.
ಬಿಜೆಪಿ ಮುಖಂಡ ಮಾನಪ್ಪ ನಾಯಕ ಮಾತನಾಡಿ ಇಂದಿನ ಯುವಕರೆ ಮುಂದಿನ ಪ್ರಜೆಗಳು. ಅಂತರ್ಜಾಲದಲ್ಲಿರುವ ಪಬ್ಜಿ, ರಮ್ಮಿ ಇನ್ನಿತರ ಆಟಗಳನ್ನು ಆಡದೆ ಕಬ್ಬಡಿ ಟೂರ್ನಮೆಂಟ್ ಆಯೊಜನೆ ಮಾಡಿ ಆಡುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು. ಪ್ರಥಮ ಬಹುಮಾನ. ೩೧೦೦೧ ಕೆ.ಶಿ.ಎನ್ ಅಭಿಮಾನಿ ಬಳಗ, ದ್ವಿತೀಯ ಬಹುಮಾನ ೨೧೦೦೧ ಮೋಕೊ ಕನ್ಸ್ಟಕ್ಷನ್ ಎಂ ಈರಣ,ತೃತೀಯ ಬಹುಮಾನ ೧೧೦೦೧ ಮಾನಪ್ಪ ನಾಯಕ ನೀಡಿದ್ದಾರೆ.
ಈ ಕಾರ್ಯಕ್ರಮವನ್ನು ಬಿಜೆಪಿ ಮಾನವಿ ಮಂಡಲ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಜಕ್ಕಲದ್ದಿನ್ನಿ ವಕೀಲರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾ ಈ ಸಂದರ್ಭದಲ್ಲಿ ಶ್ರೀ ವೀರೇಶ ನಾಯಕ ಬೆಟ್ಟದೂರು ಮಾಜಿ ಅಧ್ಯಕ್ಷರು ನಗರ ಯೋಜನಾ ಪ್ರಾಧಿಕಾರ, ಹಿರಿಯ ಮುಖಂಡರಾದ ಗುರಪ್ಪ ಸಾಹುಕಾರ, ಮಲ್ಲನಗೌಡ ಪೋಲಿಸ್ ಪಾಟೀಲ್ ಹಾಗೂ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಮತ್ತು ಗ್ರಾಮದ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು..