ಕಬ್ಜ -2ಗೆ ಚಂದ್ರು ಸಿದ್ದತೆ

*ಚಿಕ್ಕನೆಟಕುಂಟೆ.ಜಿ ರಮೇಶ್

ಕೊರೊನಾ ಸೋಂಕು ಚಿತ್ರರಂಗದ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ, ಈ ಹಿನ್ನೆಲೆಯಲ್ಲಿ ಅರ್ಧಕ್ಕೆ ನಿಂತಿರುವ ಚಿತ್ರಗಳು ಮುಂದಿನ ಹಂತದ ಚಿತ್ರೀಕರಣಕ್ಕೆ ಯಾವಾಗ ಅನುಮತಿ ಸಿಗುತ್ತದೋ ಎಂದು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.

ಈ ನಡುವೆ ಕೆಲವು ಚಿತ್ರಗಳ ಚಿತ್ರೀಕರಣ ನಂತರದ ಕೆಲಸ ಕಾರ್ಯಗಳಲ್ಲಿ ತೊಡಗಿದ್ದಾರೆ. ಇದರ ನಡುವೆ ಆರ್.ಚಂದ್ರು ಮತ್ತು ಉಪೇಂದ್ರ ಜೋಡಿಯ ಹ್ಯಾಟ್ರಿಕ್ ಕಾಂಬಿನೇಷನ್‍ನ “ಕಬ್ಜ” ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿರುವುದರಿಂದ “ಕಬ್ಜ-2” ಗೆ ನಿರ್ದೇಶಕ ಚಂದ್ರು ಸಿದ್ದತೆಯಲ್ಲಿ ತೊಡಗಿದ್ದಾರೆ.

“ಕಬ್ಜ” ಮೂಲಕ ಭೂಗತ ಲೋಕದ ಕಥೆಯನ್ನು ತೆರೆಯ ಮೇಲೆ ಕಟ್ಟಿಕೊಡುವ ಜೊತೆಗೆ ಭಾರತೀಯ ಚಿತ್ರರಂಗವನ್ನು “ ಕಬ್ಜ” ಮಾಡುವ ಪ್ರಯತ್ನ ನಡೆಸಿದ್ದಾರೆ.ಅಲ್ಲದೆ ಕನ್ನಡ ಭಾಷೆಯ ಚಿತ್ರದತ್ತ ಮತ್ತೊಮ್ಮೆ ವಿವಿಧ ಭಾಷೆಯ ಜನರು ತಮ್ಮತ್ತ ಗಮನ ಸೆಳೆಯುವ ನಿಟ್ಟಿನಲ್ಲಿ ಕೆಲಸ ಆರಂಭವಾಗಿದೆ.

ಕಬ್ಜ ಈಗಾಗಲೇ ಶೇ.65 ರಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು ಇನ್ನೂ 35 ರಷ್ಟು ಚಿತ್ರದ ಚಿತ್ರೀಕರಣ ಬಾಕಿ ಉಳಿದಿದೆ. ಕನ್ನಡ ಸೇರಿದಂತೆ ಫ್ಯಾನ್ ಇಂಡಿಯಾದಲ್ಲಿ ಚಿತ್ರ ತಯಾರಾಗುತ್ತಿರುವ ಹಿನ್ನೆಲೆಯಲ್ಲಿ  ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.ಚಿತ್ರಕ್ಕೆ ಆರ್. ಚಂದ್ರು ನಿರ್ಮಾಣ ಮಾಡುವ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ.ವಿವಿಧ ಭಾಷೆಯ ಕಲಾವಿದರು ಚಿತ್ರದಲ್ಲಿ ನಟಿಸುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಚಿತ್ರ ಸದ್ದು ಮಾಡುತ್ತಿದೆ

ಲಾಕ್‍ಡೌನ್ ಇರುವ ಹಿನ್ನೆಲೆಯಲ್ಲಿ “ಕಬ್ಜ” ಚಿತ್ರೀಕರಣ ಸ್ಥಗಿತಗೊಂಡಿದೆ.ಹೀಗಾಗಿ ಭಾಗ ಎರಡದ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಸರ್ಕಾರ ಅನುಮತಿ ಕೊಟ್ಟ ನಂತರ ಬಾಕಿ ಇರುವ ಶೇ.35 ರಷ್ಟು ಚಿತ್ರೀಕರಣ ಮಾಡುವ ಉದ್ದೇಶ ಹೊಂದಲಾಗಿದೆ ಈಗ ಪಾರ್ಟ್ -2 ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು ಚಂದ್ರು.

ನಾಯಕಿಯ ಭಾಗದ ಚಿತ್ರೀಕರಣ ಬಾಕಿ ಉಳಿದಿದೆ.  ಅನಮತಿ ಸಿಕ್ಕ ಕೂಡಲೇ ಅದರ ಚಿತ್ರೀಕರಣ ನಡೆಯಲಿದೆ.ಸದ್ಯ ಇದುವರೆಗೂ ಆಗಿರುವ ಚಿತ್ರದ ಎಡಿಟಿಂಗ್,ಸಿ.ಜಿ ವರ್ಕ್ ಮನೆಯಲ್ಲಿಯೇ ನಡೆಯುತ್ತಿದೆ. ಕನ್ನಡ ಚಿತ್ರರಂಗದ ಕಡೆಗೆ ಭಾರತೀಯ ಚಿತ್ರವನ್ನು ತಿರುಗಿ ನೋಡುವಂತೆ ಮಾಡುವ ಉದ್ದೇಶವಿದೆ ಎನ್ನುವ ವಿಶ್ವಾಸ ಅವರದು.

ಪ್ರಜಾಸೇವೆಗೆ ಅಳಿಲು ಸೇವೆ

ನಟ ಉಪೇಂದ್ರ ಅವರು ಮಾಡುತ್ತಿರುವ ಪ್ರಜಾಸೇವೆಗೆ ತಾವೂ ಕೂಡ ಅಳಿಲು ಸೇವೆ ಸಲ್ಲಿಸಿದ್ದೇನೆ. ಸಂಕಷ್ಟದ ಕಾಲದಲ್ಲಿ ಒಬ್ಬರು ಮತ್ತೊಬ್ಬರಿಗೆ ನೆರವಾಗಬೇಕು ಎನ್ನುವ ಉದ್ದೇಶದಿಂದ ನೆರವಾಗಿದ್ದೇನೆ. ಸಹಾಯ ನನ್ನದಾಗಿದ್ದರೂ ಸ್ಪೂರ್ತಿ ಉಪ್ಪಿ ಸಾರ್ ಅವರದು. ಇನ್ನೂ ತಾಯಿ ಲಕ್ಷ್ಮಿದೇವಮ್ಮ ಗ್ರಾಮ ಪಂಚಾಯತಿ ಸದಸ್ಯರು. ಆನರ ನಮ್ಮ ಮೇಲೆ ಇಟ್ಟ ನಂಬಿಕೆಗಾಗಿ ಊರಿನಲ್ಲಿ ಮತ್ತು ಅಕ್ಕ ಪಕ್ಕದ ಗ್ರಾಮಗಳಲ್ಲಿ ಮಾಸ್ಕ್, ಥರ್ಮಾ ಮೀಟರ್,ಕಿಟ್, ಔಷಧಿ ವಿತರಿಸಿ ಕಷ್ಟದಲ್ಲಿ ಕಿಂಚಿತ್ತೂ ನೆರವಾಗಿದ್ದೇವೆ

-ಆರ್.ಚಂದ್ರು,ನಿರ್ದೇಶಕ,ನಿರ್ಮಾಪಕ