ಕಬ್ಜ ಯಶಸ್ಸು ಚಂದ್ರು ಭಾವೋದ್ವಗವೂ…

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ “ಕಬ್ಜ” ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ. ಕೊರೊನಾ ಹಾವಳಿ, ಮಳೆಗೆ ಸೆಟ್ ಬಿದ್ದ ಹಾಳಾಗಾದ ಕುಸಿದು ಹೋಗಿದ್ದ ಆರ್. ಚಂದ್ರು ಮುಖದಲ್ಲಿ  ಈಗ  ಮಂದಹಾಸ ಮೂಡಿಸಿದೆ.

ಚಿತ್ರ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ.ಚಿತ್ರದ ಯಶಸ್ಸಿನ ಬಗ್ಗೆ ಹೇಳಿಕೊಳ್ಳಲು ಕರೆದಿದ್ದ ಗೋಷ್ಠಿಯಲ್ಲಿ ಆರ್.ಚಂದ್ರು ಭಾವುಕರಾದವರು ಮಾತು ಬಾರದೆ ಮೌನವಾಗಿಬಿಟ್ಟರು.

ಕೆಲಸ ಸಮಯದ ನಂತರ ಮಾತು ಮುಂದುವರಿಸಿದ ಚಂದ್ರು, ಈ ಗೆಲುವು, ಪುನೀತ್ ರಾಜ್‍ಕುಮಾರ್ ಸೆಟ್‍ಗೆ ಬಂದಾಗಲೇ ಸಿಕ್ಕಿತ್ತು. ದೊಡ್ಡ ಮೊತ್ತಕ್ಕೆ ಒಟಿಟಿ ಸೆಟಲೈಟ್ ಹಕ್ಕು ಮಾರಾಟವಾಗ ಸಂಭ್ರಮಿಸಬೇಕಾಗಿತ್ತು. ಚಿತ್ರಮಂದಿರದಲ್ಲಿ ಈಗ ಸಿಕ್ಕ ಯಶಸ್ಸು ಇಡೀ ತಂಡದ್ದು.ಕಬ್ಜ ಈ ಮಟ್ಟಕ್ಕೆ ಯಶಸ್ಸು ಕಾಣಲು ಮಂಜುನಾಥ್ ಮೌರ್ಯ ಸೇರಿದಂತೆ ಇಡೀ ನಿರ್ದೇಶಕ ತಂಡ ಕಾರಣ ಎಂದರು.

ತೆಲುಗು ನಟ ಅಲ್ಲು ಅರ್ಜುನ್‍ಗೆ ಚಿತ್ರ ಮಾಡಬೇಕು ಎಂದುಕಥೆ ಹೇಳಲು ಮುಂದಾದಾಗ ಕನ್ನಡದ ಡೈರೆಕ್ಟರಾ, ವದ್ದಮ್ಮಾ, ಎಂದಿದ್ದರು.ಇಗ ತೆಲುಗಿನಲ್ಲಿ ಕಬ್ಜ 600 ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ.ಮುಂಗಡ ಹಣ ನೀಡಿ ಚಿತ್ರ ತೆಗೆದುಕೊಂಡು ಹೋಗಿದ್ದಾರೆ. ಕನ್ನಡ ಡೈರೆಕ್ಟರಾ ಎಂದು ಅಸಡ್ಡೆಯಿಂದ ನೋಡಿದ್ದ ತೆಲುಗು ಮಂದಿಗೆ ಕಬ್ಜ ಚಿತ್ರದ ಮೂಲಕ ಉತ್ತರ ನೀಡಿದ್ದೇನೆ. ಮುಂದೆ ದೃವ ಸರ್ಜಾ ಅವರ ಮಾರ್ಟಿನ್ ಕೂಡ ಬರುತ್ತದೆ. ಆ ಚಿತ್ರ ಗೆಲ್ಲಲಿ ಎಂದು ಹಾರೈಸಿದರು.

ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತೇನೆ ಎಂದಾಗ ಹಿಂದು ಮುಂದು ನೋಡದೆ ಸಿನಿಮಾ ಮಾಡು ಎಂದು ಬೆನ್ನಿಗೆ ನಿಂತ ಉಪೇಂದ್ರ ಸರ್‍ಗೆ ಚಿತ್ರದ ಗೆಲುವು ಸಲ್ಲಬೇಕು. ಜೊತೆಗೆ ಸುದೀಪ್ ಸಾರ್,ಶಿವಣ್ಣ ಅವರ ಪಾಲು ಇದೆ.ಕೆಜಿಎಫ್ ಕನ್ನಡದ ತಾಕತ್ತನ್ನು ತೋರಿಸಿದ ಚಿತ್ರ ಆದಾದ ನಂತರ ಕಬ್ಜ ಆ ಕೆಲಸ ಮಾಡಿದೆ ಇದು ಹೆಮ್ಮೆಯ ವಿಷಯ ಎಂದರು. ಆರ್. ಚಂದ್ರು.

ನಟ ಉಪೇಂದ್ರ ಮಾತನಾಡಿ ಚಂದ್ರು ಭಾವ ಪರವಶವಾಗಿದ್ದಾರೆ. ಇತ್ತೀಚೆಗೆ ನಾವು ಸಕ್ಸಸ್ ಕೇಳುತ್ತಿದ್ದೇವೆ. ಇದು ಜೀನಿಯಸ್ ಸಕ್ಸಸ್. ಮೊದಲ ಚಂದ್ರು ನಮ್ಮ ಬಳಿ ಬಂದಾಗ ಕೈಕಟ್ಟಿ ನಿಂತಿರುತ್ತಾರೆ.ಆ ನಂತರ ಅವರ ಬಳಿ ಕೈಕಟ್ಟಿ ನಿಲ್ಲುವಂತೆ ಮಾಡುವ ಚಾಕಚಕತ್ಯತೆ ಮತ್ತು ಮೋಡಿ ಅವರಲ್ಲಿದೆ. ಅದು ಅವರ ದೊಡ್ಡ ಗುಣ ಎಂದು ಚಂದ್ರು ಮುಖದಲ್ಲಿ ನಗು ತರಿಸಿದರು ಉಪೇಂದ್ರ.

ಕಬ್ಜದಿಂದ ಸಾಕಷ್ಟು ದುಡ್ಡು ಮಾಡಿದ್ದೇನೆ ಎಂದು ಚಂದ್ರ ಹೇಳಿದ್ದಾರೆ. ಇದೀಗ ಕಬ್ಜ -2 ಮಾಡುವ ಜವಾಬ್ದಾರಿ ಚಂದ್ರು ಅವರ ಮೇಲಿದೆ. ಈಗ ಗಳಿಸಿರುವ ಹಣಕ್ಕೆ ಎರಡು ಪಟ್ಟು ಭಾಗ-2ರಕ್ಕೆ ಹಾಕಿ ಚಿತ್ರ ಮಾಡಲಿ ಎಂದರು.

ನಿರ್ಮಾಪಕ ಕೆ.ಪಿ ಶ್ರೀಕಾಂತ್ ವಿತರಕ ಮೋಹನ್, ಕಲಾವಿದರಾದ ಬಿ.ಸುರೇಶ್, ನೀನಾಸಂ ಅಶ್ವಥ್, ಶೋಭಾ ರಾಘವೇಂದ್ರ ಹಾಡು ಬರೆದಿರುವ ಕಿನ್ನಾಳ್ ರಾಜ್ ಸೇರಿದಂತೆ ಮತ್ತಿತರು ಅಭಿಪ್ರಾಯ ಹಂಚಿಕೊಂಡರು