`ಕಬ್ಜ’ಗೆಲುವಿನ ಸವಾರಿ

ಆರ್. ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸಿರುವ, ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಕಿಚ್ಚ ಸುದೀಪ ವಿಶೇಷಪಾತ್ರದಲ್ಲಿ ಅಭಿನಯಿಸಿರುವ “ಕಬ್ಜ” ಚಿತ್ರ ಗೆಲುವಿನ ಸವಾರಿ ಮುಂದುವರಿಸಿದೆ.

ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದಂದು ಬಿ ವಿಶ್ವದಾದ್ಯಂತ ಬಿಡುಗಡೆಯಾಗಿ ಪ್ರಚಂಡ ಜಯಭೇರಿ ಸಾಧಿಸಿದೆ.

ಬಿಡುಗಡೆಯಾಗಿ ಮೂರು ವಾರಗಳಾಗಿದೆ‌. “ಕಬ್ಜ” ಚಿತ್ರದ ಯಶಸ್ಸಿನ ಯಾತ್ರೆ ಈಗಲೂ ಜೋರಾಗಿ ಸಾಗಿದೆ. ಚಿತ್ರಮಂದಿರಗಳು ಸಂಖ್ಯೆ ಕೂಡ ಹೆಚ್ಚಾಗಿದೆ. ಜನರಿಂದ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಗೆ ಮನ ತುಂಬಿ ಬಂದಿದೆ ಎಂದು ನಿರ್ದೇಶಕ – ನಿರ್ಮಾಪಕ ಆರ್ ಚಂದ್ರು ತಿಳಿಸಿದ್ದಾರೆ.

ಚಿತ್ರಕ್ಲೆ ಸಿಕ್ಕ ಅಭೂತಪೂರ್ವ ಗೆಲುವಿನಿಂದ ನಿರ್ದೇಶಕ ಆರ್ ಚಂದ್ರು ಭಾಗ ಎರಡು ಚಿತ್ರಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಬಹುತಾರಾಂಗಣ ಮತ್ತು ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಕಬ್ಜ ಚಿತ್ರ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲಿ ದಾಖಲೆ ಬರೆದಿದ್ದು. ಮೂರನೇ ವಾರವೂ ಚಿತ್ರಮಂದಿರದಲ್ಲಿ ಗೆಲುವಿನ ಓಟ ಮುಂದುವರಿಸಿದೆ.

ಚಿತ್ರ ಬಿಡುಗಡೆಯಾದ ಎಲ್ಲೆಡೆ ಇಂದಿಗೂ ಕೂಡ  ಎಲ್ಲೆಡೆ  ಪ್ರಶಂಸೆ ಮತ್ತು ಪ್ರತಿಕ್ರಿಯೆ ಪಡೆದು ಮುನ್ನೆಡೆದಿದೆ. ಇದು ಸಹಜವಾಗಿ ನಿರ್ಮಾಪಕ,ನಿರ್ದೆಶಕ ಚಂದ್ರು ಮುಖದಲ್ಲಿ‌ಮಂದಹಾಸ ಮೂಡಿಸಿದೆ.