
ಆಲಮಟ್ಟಿ :ಆ.31: ಸ್ಥಳೀಯ ಎಂ.ಎಚ್.ಎಂ.ಪಪೂ ಕಾಲೇಜಿನ ಆಶ್ರಯದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಪಪೂ ಕಾಲೇಜುಗಳ ತಾಲೂಕು ಮಟ್ಟದ ಕಬಡ್ಡಿ ಟೂರ್ನಿಯ ಬಾಲಕಿಯರ ವಿಭಾದ ಪ್ರಶಸ್ತಿ ಅತಿಥೇಯ ತಂಡ ಪಡೆದುಕೊಂಡಿದೆ.
ಅಂತಿಮ ಪಂದ್ಯದಲ್ಲಿ ಮಸಬಿನಾಳ ಕಾಲೇಜು ತಂಡವನ್ನು ಪರಾಭವಗೊಳಿಸಿ ಎಂ.ಎಚ್.ಎಂ.ಕಾಲೇಜು ತಂಡ ಪ್ರಥಮ ಸ್ಥಾನ ಪಡೆಯಿತು.
ಬಹುಮಾನ ವಿತರಣಾ ಸಮಾರಂಭದಲ್ಲಿ ಪಿ.ಎ.ಹೇಮಗಿರಿಮಠ, ಜಿ.ಎಂ.ಕೋಟ್ಯಾಳ, ಎಚ್.ಎನ್.ಕೆಲೂರ,ಎಸ್.ಆಯ್. ಗಿಡ್ಡಪ್ಪಗೋಳ,ಬಸಯ್ಯ ಶಿವಯೋಗಿಮಠ, ಎಸ್.ಡಿ.ನದಾಫ್,ರಮೇಶ ತೋಟದ, ಎಸ್.ಎಂ.ಹೆಬ್ಬಾಳ, ಸಿ.ಬಿ.ಬಿರಾದಾರ, ಎಸ್.ಎಸ್.ಬಳಬಟ್ಟಿ, ಆರ್.ಪಿ.ಚಲವಾದಿ, ಎಂ.ಬಿ.ಹೂಗಾರ, ಎಸ್.ಆರ್.ಮುತ್ತಗಿ, ರವಿ ಕಟ್ಟಿಮನಿ ಮೊದಲಾದವರಿದ್ದರು.
ಕ್ರೀಡಾಪಟುಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ತೋಂಟದ ಡಾ.ಸಿದ್ದರಾಮ ಮಹಾಸ್ವಾಮಿಗಳು,ಕಾರ್ಯದರ್ಶಿ ಪ್ರೊ,ಶಿವಾನಂದ ಪಟ್ಟಣಶೆಟ್ಟರ, ಪ್ರಾಚಾರ್ಯ ಪಿ.ಎ.ಹೇಮಗಿರಿಮಠ ಸೇರಿದಂತೆ ಕಾಲೇಜು ಸಿಬ್ಬಂದಿಗಳು ಅಭಿನಂದಿಸಿದ್ದಾರೆ.