ಕಬಡ್ಡಿ : ಜಿ.ಕೋಡಿಹಳ್ಳಿ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಆ.09 : ತಾಲೂಕಿನ ಜಿ.ಕೋಡಿಹಳ್ಳಿ ಸಮಾಹಿಪ್ರಾ ಶಾಲೆಯ ಬಾಲಕ ಮತ್ತು ಬಾಲಕಿಯರ ಕಬಡ್ಡಿ ತಂಡಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿವೆ.
ಇತ್ತೀಚಿಗೆ ಜರುಗಿದ ಬನ್ನಿಕಲ್ಲು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಜಿ.ಕೋಡಿಹಳ್ಳಿ ಶಾಲೆಯ ವಿದ್ಯಾರ್ಥಿಗಳು ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾಗಿ ತಾಲೂಕು ಮಟ್ಟ ಪ್ರವೇಶಿಸಿದ್ದಾರೆ. ಕ್ರೀಡಾ ಸಾಧನೆ ಮೆರೆದಿರುವ ವಿಜೇತ ತಂಡಗಳನ್ನು ಶಾಲೆಯ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಅಭಿನಂದಿಸಿದ್ದಾರೆ.