
ಅಥಣಿ :ಅ.9: ಹಾವೇರಿ ಜಿಲ್ಲೆಯ ಬ್ಯಾಡಗಿ ನಗರದಲ್ಲಿ
ಶಾಲಾ ಶಿಕ್ಷಣ ಇಲಾಖೆಯು ಇಂದು ದಿ, 09 ರಿಂದ ದಿ.11ರ ವರೆಗೆ ಮೂರು ದಿನಗಳ ಕಾಲ ಬೆಳಗಾವಿ ವಿಭಾಗ ಮಟ್ಟದ ಗಂಡು ಮಕ್ಕಳ ಕಬಡ್ಡಿ ಕ್ರೀಡಾಕೂಟ ಜರುಗಲಿವೆ. ಆ ಕ್ರೀಡಾಕೂಟದಲ್ಲಿ ತಾಲೂಕಿನ ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಬೆಳಗಾವಿ ವಿಭಾಗ ಮಟ್ಟದ ಕಬಡ್ಡಿ ಕ್ರೀಡಾಕೂಟಕ್ಕೆ ಕು.ಅಶ್ವಥ ಮಲ್ಲಪ್ಪಾ ತೇಲಿ ಹಾಗೂ ಕು. ಸಮೀರ ಹಸನ ನದಾಫ ಇಬ್ಬರು ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದು. ಇವರಿಗೆ ಸುರೇಶ ಸನದಿ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಕ ಪ್ರಶಾಂತ ಹಳ್ಳೂರ ತರಬೇತಿ ನೀಡಿದ್ದಾರೆ
ಒಂಬತ್ತು ಜಿಲ್ಲೆಗಳು ಪ್ರತಿನಿಧಿಸುವ ಈ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿರುವ ನಮ್ಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿ ಎಂದು ಸಂಸ್ಥೆಯ ಮುಖ್ಯಸ್ಥ ಡಿ.ಬಿ.ನದಾಫ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕ ಮುಕುಂದ ತೀರ್ಥ ಹಾಗೂ ಆಡಳಿತ ಮಂಡಳಿ, ಎಲ್ಲ ಸಿಬ್ಬಂದಿಯವರು, ಶಾರದಾ ಹಿರಿಯ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ಸಮಸ್ತ ಪಾಲಕ ಬಂಧುಗಳು ಹೃತ್ಪೂರ್ವಕ ಹಾರೈಕೆ ಜೊತೆಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.