ಕಬಡ್ಡಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಹುಮನಾಬಾದ :ಜ.12: ತಾಲೂಕಾ ಮತ್ತು ಜಿಲ್ಲಾ ಮಟ್ಟದ ಗ್ರಾಮಿಣ ಕ್ರೀಡಾಕೂಟಗಳಲ್ಲಿ ಪಟ್ಟಣದ ವಿಶ್ವ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಕಬಡ್ಡಿ ಆಟದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ವಿಶೇಷವಾಗಿ ಗ್ರಾಮಿಣ ಪ್ರದೇಶದ ಮಕ್ಕಳು ತಾಲೂಕ ಮತ್ತು ಜಿಲ್ಲಾ ಮಟ್ಟದ ಸ್ಪರ್ದೇಯಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾ ಪಟುಗಳ ಹೆಸರು ವಾಣಿಶ್ರೀ ಸಂಜಯಕುಮಾರ, ಪ್ರಜ್ಞಾ ಲಕ್ಷ್ಮಣ, ನಂದಿನಿ ದಿಲಿಪರಡ್ಡಿ, ಭಾಗ್ಯಶ್ರೀ ಬಂಡೆಪ್ಪಾ, ಅನಿತಾ ದೇವಿಂದ್ರಪ್ಪಾ, ಐಶ್ವರ್ಯ ದಯಾನಂದ, ಸುಧಾರಾಣಿ ಬಸವರಾಜ, ಮೇಘಾ ಬಂಡೆಪ್ಪಾ, ರೇಷ್ಮಾ ದಶರಥ, ಪ್ರಕೃತಿ ರಮೆಶ, ಐಶ್ವರ್ಯ ರಾಜಕುಮಾರ, ಮೀನಾಕ್ಷಿ ದೇವಿಂದ್ರಪ್ಪ, ಸಾಕ್ಷಿ ರವಿ, ಮಹಾದೇವಿ ಕಲ್ಲಪ್ಪಾ, ಕಿರ್ತಿ ಅಶೋಕ ಈ ಮಕ್ಕಳಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಮಕ್ಕಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ರಾಜಕುಮಾರ ಭೂರೇಶ, ಮುಖ್ಯ ಗುರುಗಳಾದ ಜೀವನ ರೆಡ್ಡಿ ಶೇರಿಕಾರ, ಬೆಂಜಮೆನ್ ಭೂರೇಶ, ರಜನಿ, ಡ್ಯಾನಿಯಲ್, ಶ್ರೀಕಾಂತ ಕೊಡಂಬಲ, ಮಿನಾಕ್ಷಿ ಶಿವಪೂರೆ, ಅರುಣ, ಮಂಜುಳಾ ತಳಸಂದೆಕರ್, ಸಾಗರ ಢೋಲೆ, ಬಾಬುರಾವ ಹಿರೋಳೆ, ಹರ್ಷ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.