ಕಫ ನಿವಾರಣೆಗೆ ಸಲಹೆ

ಬಿಸಿ ನೀರಲ್ಲಿ ಉಪ್ಪು ಹಾಕಿ ದಿನಕ್ಕೆ ೨ ರಿಂದ ೩ ಬಾರಿ ಬಾಯಿಗೆ ಹಾಕಿ ಗಾರ್ಗಲ್ ಮಾಡಿದರೆ ಗಂಟಲಿನಲ್ಲಿರುವ ಕಫ ನಿವಾರಣೆಯಾಗುತ್ತದೆ.

-ಗಂಟಲಿನಲ್ಲಿ ಕಫ ಹೆಚ್ಚಿದ್ದರೆ ನಿಂಬೆ ಹಣ್ಣಿನ ತುಂಡಿಗೆ ಸ್ವಲ್ಪ ಸೈಂಧವ ಉಪ್ಪು ಮತ್ತು ಕರಿಮೆಣಸಿನ ಪುಡಿ ಉದುರಿಸಿ ಆ ರಸವನ್ನು ಸೇವಿಸಿದರೆ ಕಫ ಶಮನವಾಗುತ್ತದೆ.

-ಹಸಿಶುಂಠಿ ಕಷಾಯ ಮಾಡಿ ಅದಕ್ಕೆ ಜೇನುತುಪ್ಪ ಕಲಸಿ ದಿನಕ್ಕೆ ೨-೩ ಬಾರಿ ಕುಡಿದರೆ ಕಫ ಬೇಗ ಕರಗುತ್ತದೆ.

-ಚಕ್ಕೆ ಮತ್ತು ಹಸಿ ಶುಂಠಿಯನ್ನು ನೀರಲ್ಲಿ ಸೇರಿಸಿ ಮಾಡಿದ ಕಷಾಯವನ್ನು ದಿನಕ್ಕೆ ೩ ಬಾರಿ ಸೇವಿಸಿದರೆ ಗಂಟಲ ಕಫ ಶಮನವಾಗುತ್ತದೆ.

-ಒಂದು ಚಮಚ ಅರಿಶಿನ ಪುಡಿಯನ್ನು ಬಿಸಿನೀರಲ್ಲಿ ಕಲಸಿ ಪದೇ ಪದೆ ಸೇವಿಸಿದರೆ ಕಫ ನಿವಾರಣೆಯಾಗುತ್ತದೆ.

-ಕರಿಮೆಣಸಿನ ಪುಡಿಗೆ ಜೇನುತುಪ್ಪ ಸೇರಿಸಿ ದಿನಕ್ಕೆ ೪ ರಿಂದ ೫ ಬಾರಿ ಸ್ವಲ್ಪ ಸ್ವಲ್ಪ ಸೇವಿಸಿದರೆ ಗಂಟಲ ಕಫ ಕರಗುತ್ತದೆ.

-ಸೋಂಪುಕಾಳುಗಳನ್ನು ನೀರಲ್ಲಿ ಹಾಕಿ ಕಷಾಯ ತಯಾರಿಸಿ ಆಗಾಗ ಸೇವಿಸಿದರೆ ಕಫ ನಿವಾರಣೆಯಾಗುತ್ತದೆ.

-ಈರುಳ್ಳಿಯನ್ನು ಕತ್ತರಿಸಿ ಅದಕ್ಕೆ ಸಕ್ಕರೆ ಬೆರೆಸಿ ೩೦ ನಿಮಿಷ ಬಿಡಿ ನಂತರ ಅದರಿಂದ ಬಂದ ರಸವನ್ನು ೨ ರಿಂದ ೩ ಬಾರಿ ಸೇವಿಸಿದರೆ ಪ್ರಯೋಜನವಿದೆ.

-ಎರಡು ಪಲಾವ್ ಎಲೆಯನ್ನು ನೀರಲ್ಲಿ ಚೆನ್ನಾಗಿ ಕುದಿಸಿ. ಆ ನೀರನ್ನು ಪದೇ ಪದೆ ಬಿಸಿ ಬಿಸಿಯಾಗಿ ಕುಡಿದರೆ ಕಫ ಕರಗುತ್ತದೆ.

-ಹಸಿ ಕ್ಯಾರೆಟ್‌ಗೆ ಸ್ವಲ್ಪ ನೀರು ಸೇರಿಸಿ ಜ್ಯೂಸ್ ಮಾಡಿ ಅದಕ್ಕೆ ಜೇನುತುಪ್ಪ ಸೇರಿಸಿ ಆಗಾಗ ಕುಡಿದರೆ ಗಂಟಲಿನ ಕಫ ನಿವಾರಣೆಯಾಗುತ್ತದೆ.