ಕಫ್ರ್ಯೂ ಟೈಟ್ ಜನರ ಓಡಾಟಕ್ಕೆ ಬ್ರೇಕ್!

ವಾಡಿ: ಎ.25:ಕಠಿಣವಾಗಿ ನಿಯಮ ಅನುಸಾರವಾಗಿ ಜಾರಿಗೊಳಿಸಿರುವ ಕಫ್ರ್ಯೂನಿಂದ ಜನರ ಓಡಾಟಕ್ಕೆ ಬ್ರೇಕ್ ಬೀದಿದ್ದೆ.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ನಿಯಮನುಸಾರವಾಗಿ ಮದುವೆ ಜನ, ಆಸ್ಪತ್ರೆ, ಹಾಗೂ ತರಕಾರಿ ಖರೀದಿ, ದಿನಸಿ ಸಾಮಗ್ರಿ ಹಾಗೂ ಬೇರೆ ಊರುಗಳಿಗೆ ಹೋಗಬೇಕಾದ ಜನ ಬಿಟ್ಟು ಅನಗತ್ಯವಾಗಿ ಓಡಾಟ ಮಾಡುವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಆದರೆ, ಒಡಾವಣೆಗಳಲ್ಲಿ ಯುವಕರ ಗುಂಪುಗಳು ಅಲ್ಲಲ್ಲಿ ಬೀಟರೆ ಸಂಡೇ ಕಫ್ರ್ಯೂಗೆ ಜನ ಬೆಂಬಲ ನೀಡಿದ್ದಾರೆ.

ಪಿಎಸ್‍ಐ ವಿಜಯಕುಮಾರ ಬಾವಗಿ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಸಮಯನುಸಾರವಾಗಿ ಅಂಗಡಿಗಳನ್ನು ಬಂದ್ ಮಾಡಬೇಕೆಂದು ಕಡಕ್ ಎಚ್ಚರಿಕೆ ನೀಡಿದರು. ವಾಡಿ ಠಾಣೆ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಜನರು ಮನೆಯಿಂದ ಹೊರಬರದಂತೆ ಸೈರನ್ ಮೂಲಕ ಸಂದೇಶ ರವಾನಿಸಿದರು.

ಕಲಬುರಗಿ- ಯಾದಗಿರಿ ಬಸ್ ಸಂಚಾರ ಎಂದಿನಂತೆ ನಡೆಯುತ್ತಿದೆ. ಬೆಳಗ್ಗೆಯಿಂದ ಸಾಯಂಕಾಲದವರೆಗೂ ಬಸ್ ಸಂಚರಿಸಲಿವೆ. ದೂರದ ನಗರಕ್ಕೆ ತೆರಳುವ ಪ್ರಯಾಣಿಕರು ಪರದಾಡಿದ ಪ್ರಸಂಗ್‍ಗಳು ನಡೆದವು.

ಸೋಮವಾರ ಬೆಳಗ್ಗೆ 6ಗಂಟೆಗೆ ಕಫ್ರ್ಯೂ ಅಂತ್ಯ ಆಗುತ್ತಿರುವಾಗಲೇ ಸರ್ಕಾರ ಇನ್ನೊಂದು ವಾರದ ಕಫ್ರ್ಯೂಗೆ ಚಿಂತನೆ ನಡೆಸುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಪರಿಹಾರವಿಲ್ಲದೇ ಜಾರಿಗೊಳಿಸುತ್ತಿರುವ ಕಠಿಣ ನಿಯಮಗಳಿಗೆ ಜನರು ಯಾವ ರೀತಿ ಸಹಕಾರ ನೀಡುತ್ತಾರೆಂಬುದು ಕಾದು ನೋಡಬೇಕಿದೆ.