ಕಫ್ರ್ಯೂವಿನಿಂದ ಕೂಲಿ ಕಾರ್ಮಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ: ಪೋಲಿಸ್ ಆಯುಕ್ತರಿಗೆ ಕಂದಳ್ಳಿ ಒತ್ತಾಯ

ಕಲಬುರಗಿ, ಮೇ 4 :ಕಟ್ಟಡ ಕಾರ್ಮಿಕರಿಗೆ ದಿನನಿತ್ಯ ಕೂಲಿ ಕೆಲಸಕ್ಕೆ ಹೋಗುವವರಿಗೆ ಪೊಲೀಸರು ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಕಫ್ರ್ಯೂ ಜಾರಿ ಹಿನ್ನೆಲೆಯಲ್ಲಿ ತಡೆದು ಕಿರುಕುಳ ನೀಡುತ್ತಿರುವುದನ್ನು ತಡೆಗಟ್ಟಿ ದಿನನಿತ್ಯ ಕೂಲಿಗಾಗಿ ನಿತ್ಯ ಕೆಲಸಕ್ಕೆ ಹೋಗಿಬರಲು ಪೊಲೀಸ್ ಇಲಾಖೆಯ ಸಿಬ್ಬಂದಿಯವರಿಂದ ತೊಂದರೆ ಆಗುತ್ತಿದೆ. ಅದನ್ನು ತಡೆಗಟ್ಟಿ ಕೂಲಿ ಕಾರ್ಮಿಕರಿಗೆ ತೊಂದರೆಯಾಗದಂತೆ ಅನುಕೂಲ ಮಾಡಿಕೊಡಬೇಕೆಂದು ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಭೀಮರಾಯ್ ಎಂ. ಕಂದಳ್ಳಿ ಅವರು ಒತ್ತಾಯಿಸಿದರು.
ಮಂಗಳವಾರ ನಗರ ಪೋಲಿಸ್ ಉಪ ಆಯುಕ್ತ ಡಿ. ಕಿಶೋರಬಾಬು ಅವರಿಗೆ ಮನವಿ ಪತ್ರ ಸಲ್ಲಿಸಿದ ಅವರು, ಕಟ್ಟಡದ ಕಾರ್ಮಿಕರು ದಿನನಿತ್ಯದ ಕೂಲಿ ಕೆಲಸ ಮಾಡಿಕೊಂಡು ಉಪಜೀನವ ಸಾಗಿಸುತ್ತಿರುವವರಿಗೆ ಸರ್ಕಾರವು ಬಡವರಿಗೆ, ಕೂಲಿ ಕಾರ್ಮಿಕರಿಗೆ ತೊಂದರೆ ಕೊಡಬಾರದಂತೆ ಸ್ಪಷ್ಟ ನಿರ್ದೇಶನವಿದ್ದರೂ ಕೂಡಾ ಪೊಲೀಸ್ ಇಲಾಖೆಯ ಸಿಬ್ಬಂದಿಯವರು ಬಡವರನ್ನು ಹಾಗೂ ಕೂಲಿ ಕಾರ್ಮಿಕರರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಗರ ಸುತ್ತಮುತ್ತ ಹೊರವಲಯದಲ್ಲಿ ಕೂಲಿ ಕಾರ್ಮಿಕರು ಕೂಲಿಗಾಗಿ ನಿತ್ಯ ಹರಸಾಹಸಪಟ್ಟರೆ ಪೊಲೀಸ್‍ರು ಮಾತ್ರ ಬಡವರಿಂದ ಹಣ ಕೇಳುವುದು ಯಾವ ನ್ಯಾಯವಾಗಿದೆ ಎಂದು ಬೇಸರದಿಂದ ಪ್ರಶ್ನಿಸಿದ ಅವರು, ದಿನನಿತ್ಯದಲ್ಲಿ ಕಟ್ಟಡದ ಕೆಲಸಕ್ಕಾಗಿ ಪ್ರತಿನಿತ್ಯ ಕೂಲಿ ಕೆಲಸಕ್ಕೆ ಬಡವರು ಮತ್ತು ಕೂಲಿ ಕಾರ್ಮಿಕರು ಕಟ್ಟಡ ಕೆಲಸಕ್ಕಾಗಿ ಹೋಗಿ ಬರುವವರಿಗೆ ಪೊಲೀಸ್ ಇಲಾಖೆಯ ಸಿಬ್ಬಂದಿಯವರು ತುಂಬಾ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.
ಕೂಲಿ ಕೆಲಸಗಾರರನ್ನು ತಡೆದು ವಿನಾಕಾರಣ ದಂಡ ವಸೂಲಿ ಮಾಡುತ್ತಿದ್ದಾರೆ. ಅಲ್ಲದೇ ಲಾಠಿಯಿಂದ ಸಿಕ್ಕಾಪಟ್ಟೆ ಹೊಡೆಯುತ್ತಿದ್ದಾರೆ. ಹೀಗಾಗಿ ಕಷ್ಟಪಟ್ಟು ದುಡಿಯುತ್ತಿರುವ ಕೂಲಿ ಕೆಲಸ ಮಾಡಿ ಬಂದಿರುವು ಕೂಲಿ ಕೆಲಸದ ಹಣವನ್ನು ಪೊಲೀಸರಿಗೆ ದಂಡ ಭರಿಸಿ ಬರಿಗೈಯಿಂದ ತೊಂದರೆ ಪಟ್ಟುಕೊಂಡು ಮನೆಗೆ ಹಿಂತಿರುಗುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಿವುಕುಮಾರ್ ಎಸ್. ಬೆಳ್ಳಿಗೇರಿ, ಕಾರ್ಯದರ್ಶಿ ಮರೆಪ್ಪ ಎಚ್. ರೊಟ್ಟನಡಗಿ, ಸಹ ಕಾರ್ಯದರ್ಶಿ ಶರಣು ಬಳಿಚಕ್ರ, ಖಜಾಂಚಿ ದೇವಿಂದ್ರ ಬಳಿಚಕ್ರ ಮುಂತಾದವರು ಉಪಸ್ಥಿತರಿದ್ದರು.