ಕಪ್ಪು ಹಣ ತರುವುದಾಗಿ ಹೇಳಿದ ಮೋದಿ ತಂದರೇ:ಅಪ್ಪಾಜಿ

ಮುದ್ದೇಬಿಹಾಳ: ಫೆ.3:ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರದಾನಿ ನರೇಂದ್ರ ಮೋದಿಯವರು ಕಪ್ಪು ಹಣವನ್ನು ಭಾರತಕ್ಕೆಮರಳಿ ತರುತ್ತೇನೆ, ಅದರಲ್ಲಿ ಬಂದ ಹಣವನ್ನು ಭಾರತದ ಪ್ರತಿಯೊಬ್ಬ ನಾಗರಿಕನಿಗೂ 13 ಲಕ್ಷ ಅವರ ಬ್ಯಾಂಕ ಖಾತೆಗೆ ವರ್ಗಾವಣೆ ಮಾಡುತ್ತೇವೆ ಹೀಗೇ ಅನೇಕ ಸುಳ್ಳು ಭರವಸೆಗಳನ್ನು ನೀಡಿ ಚುನಾವಣೆ ಗೆದ್ದು ಬಂದಿದ್ದರಿ ಆದರೇ ಕಪ್ಪು ಹಣವನ್ನು ನಿಮ್ಮಿಂದ ತರಲು ಸಾಧ್ಯವಾಗಿಲ್ಲ ಜತೆಗೆ ಭಾರತದ ಯಾವ ಒಬ್ಬ ನಾಗರಿಕನಿಗೂ 13 ಲಕ್ಷ ಹಣ ಹಾಕಲಿಲ್ಲ ಇಂತಹ ಬಂಡ ಬಿಜೆಪಿಯವರ ಮಾತು ಕೇಳಬೇಡಿ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನ ಮತ್ತು ಮಾರ್ಜಕ ನಿಮಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು
ಪಟ್ಟಣದ ವಿಬಿಸಿ ಹೈಸ್ಕೂಲ ಮೈದಾನದಲ್ಲಿ ತಾಲೂಕಿನ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಹಾಗೂ ಸರಕಾರ ಗ್ಯಾರಂಟಿ ಯೋಜನೆಗಳ ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ಪಟ್ಟಣದ ಪುರಸಭೆಯ ಪೌರಾಢಳಿತದ ವತಿಯಿಂದ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು
ಸಂದರ್ಭದಲ್ಲಿ ಭರವಸೆ ಕೊಟ್ಟಿದ್ದರೋ ಅದನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರು ಎಲ್ಲ ಭರವಸೆಗಳನ್ನು ಗ್ಯಾರಂಟಿಗಳನ್ನು ಇಡೇರಿಸುವ ಮೂಲಕ ನುಡಿದಂತೆ ನಡೆದಿದ್ದಾರೆ. ಮುಂಬರುವ ದಿನಗಳಲ್ಲಿ ಇದೇ ರೀತಿ ಸದಾ ಬೆಂಬಲಿಸಿದರೇ ನಿಜವಾದ ಕಡು ಬಡವರ ದೀನ ದಲಿತರ, ಅಲ್ಪ ಸಂಖ್ಯಾತರ, ರೈತರ ಪರವಾಗಿ ನಿಲ್ಲುವ ಮೂಲಕ ಉತ್ತಮ ಸಮಾಜ ನಿರ್ಮಾಣಗೊಳ್ಳುವುದರಲ್ಲಿ ಯಾವೂದೇ ಸಂದೇಹವಿಲ್ಲ. ಯಾವೂದೇ ವ್ಯಕ್ತಿಗೆ ಅಧಿಕಾರ ಮುಖ್ಯವಲ್ಲ ತನ್ನ ಅಧಿಕಾರದಲ್ಲಿ ಎಷ್ಟು ಜನರಿಗೆ ಒಳ್ಳೆಯ ನ್ಯಾಯ ಕೊಡಿಸಿದ್ದೇನೆ ಶಾಶ್ವತ ಜನಪರ ಆಡಳಿತ ಕೊಟ್ಟಿದ್ದೇನೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ ಅದನ್ನು ಸಧ್ಯ ಸಿದ್ರಾಮಯ್ಯನವರು ಎರಡು ಬಾರಿ ಮುಖ್ಯಮಂತ್ರಿಗಳಾಗಿ ತೋರಿಸಿದ್ದಲ್ಲದೇ ಶಾಸಶ್ವತ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನರ ಪರವಾದ ನಾಯಕರಾಗಿ ಬೆಳೆದು ನಿಂತಿದ್ದೇ ಪ್ರತ್ಯಕ್ಷ ಸಾಕ್ಷಿಯಾಗಿದೆ. ಸಿದ್ರಾಮಯ್ಯನವರಿಗೇ ಹಿಂದಿನ ಬಾಗಿಲಿನಿಂದ ರಾಜಕಾರಣ ಮಾಡುವುದು ಯಾವತ್ತಿಗೂ ಗೊತ್ತಿಲ್ಲ ಹಾಗೇ ಮಾಡಿದ ಉದಾಹರಣೆಗಳೇ ಇಲ್ಲ. ಆದರೇ ಬಿಜೆಪಿಯವರು ಹಿಂದಿನ ಬಾಗಿಲಿನಿಂದ ರಾಜಕಾರಣ ಮಾಡುವುದು ಕರತಲಾಮಲಕ ಮಾಡಿಕೊಂಡಿದ್ದಾರೆ ಎಂದರೆ ಅವರಿಗೆ ಅಷ್ಟೋಂದ ಹಣ ಎಲ್ಲಿಂದ ಬರುತ್ತದೆ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು.
ದೇಶದಲ್ಲಿ ರಾಜ್ಯದಲ್ಲಿ ರಾಜಕಾರಣದ ವ್ಯವಸ್ಥೇ ಹದಗೆಟ್ಟು ಹೋಗಿದೆ ರಾಜಕಾರಣದಲ್ಲಿ ನೈಜ ಒಳ್ಳೆಯ ರಾಜಕಾರಣವಿರಬೇಕೋ ಅಥವಾ ಬ್ರಷ್ಟ ರಾಜಕಾರಣ ವ್ಯವಸ್ತೆ ಇರಬೇಕೋ ಎಂಬುದನ್ನು ಜನರೇ ತಿರ್ಮಾನಿಸಬೇಕು ಈ ಹಿಂದಿನ ಬಿಜೆಪಿ ಸರಕಾರ ಪ್ರಸ್ತುತ ಸರಕಾರದ ತಲೆ ಮೇಲೆ ಸಾವಿರಾರು ಕೋಟಿಗಳಷ್ಟು ಸಾಲ ಮಾಡಿಟ್ಟು ಹೋಗಿದ್ದಾರೆ ಅದ್ಯಾವುದಕ್ಕೂ ಮುಖ್ಯಮಂತ್ರಿ ಸಿದ್ರಾಮಯ್ಯನವರು ಹೇದರಿಲ್ಲ ಧೈರ್ಯದಿಂದ ಉತ್ತಮ ಜನಪರ ಆಡಳಿತ ನೀಡುವಲ್ಲಿ ಸತತವಾಗಿ ಪ್ರಯತ್ನಿಸುತ್ತಲೇ ಇದ್ದಾರೆ.
ಯಾವದೋ ಒಬ್ಬ ಮಾಜಿ ಶಾಸಕರು ನಮ್ಮ ಸರಕಾರದಲ್ಲಿ ತಂದ ಅನುದಾನವನ್ನು ನೀವೇಕೆ ಉದ್ಘಾಟನೆ ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದ್ದಾರೆ ಆದರೇ 2018ಕ್ಕಿಂತ ಪೂರ್ವದಲ್ಲಿ ನಾನು ತಂದ ಅನುದಾನವನ್ನು ಹಣವನ್ನು ಕಾಮಗಾರಿಗಳನ್ನು ನೀವೇಕೆ ಉದ್ಘಾಟನೆ ಮಾಡಿದ್ದಿರಿ .? ಯಾವೂದೇ ವ್ಯವಕ್ತಿ ಬದಲಾಗಬಹುದು ಸರಕಾರಬರಬಹುದು ಸರಕಾರ ಯಾವತ್ತಿಗೂ ಸಾಯುವುದಿಲ್ಲ ನಿರಂತರವಾಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡರೆ ಸಾಕು ಎಂದರು.
ಈ ಹಿಂದಿನ ಸರಕಾರದಲ್ಲಿ ಚುನಾವಣೆ ಬಂದಿದೆ ಎನ್ನುವ ಕಾರಣಕ್ಕೆ ಆರ್ಥಿಕ ಹಣÀಕಾಸು ಇಲಾಖೆ ಅನುಮೋದನೆ ನೀಡಲು ನಿರಾಕರಿಸಿದ್ದರೂ ಆಯಾ ಸಂಬಂಧಪ್ಪ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಒಂದು ಬಿಳಿ ಪೇಪರ ಮೇಲೆ ಸೀಲು ಸಹಿ ಹಾಕಿಕೊಂಡು ಕಾಮಗಾರಿ ನಡೆಸೋದ ಅದರಿಂದ ಮುಂದಬರುವ ದಿನಗಳಲ್ಲಿ ಏನೆಲ್ಲೊ ತೊಂದರೆಗಲಾಗುತ್ತವೆ ಎನ್ನುವ ಸಾಮಾನ್ಯ ಜ್ಞಾನವೂ ಕೂಡ ಇರಬೇಕಲ್ಲವೇ. 300ಯೂನಿಟ್ ವಿದ್ಯುತ್ ಉಚಿತ ಎಂದು ಕೇಂದ್ರ ಬಿಜೆಪಿ ಸರಕಾರ ಬಜೇಟ ಮಂಡಿಸಿದ್ದಾರೆ ಆದರೇ ನಾಯ್ಕೈದು ಲಕ್ಷ ಕರ್ಚು ಮಾಡಿ ಸೋಲಾರ ವಿದ್ಯುತ್ ಅಳವಡಿಸಿಕೊಂಡಿರಬೇಕು ಅಂತಹವರಿಗೆ ಈ ಯೋಜನೆ ಲಾಬ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗಾದರೇ ನಿಮ್ಮ ಯೋಜನೆ ಬಡವರಿಗೆ ಮುಟ್ಟಲು ಹೇಗೆ ಸಾಧ್ಯ.
ಸಧ್ಯ ಎಲ್ಲೆಡೆ ಭೀಕರ ಬರಗಾಲ ಎದುರಾಗಿ ತೀವೃ ಸಂಕಷ್ಟದಲ್ಲಿರೂ ಸಹಿತ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಕೊಟ್ಟಿರುವ ಐದು ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಯಾವೂದೇ ಯಾವೂದೇ ತೊಂದರೆ ಕಾಣದೇ ಮುಖದಲ್ಲಿ ಮಂದಹಾಸ ಮಾಡಿದೆ. ಇಡೀ ಜಿಲ್ಲೇಯಲ್ಲಿಯೇ ಮುದ್ದೇಬಿಹಾಳ, ಇಂಡಿ, ಸಿಂದಗಿ ತಾಲೂಕುಗಳಲ್ಲಿಬರಗಾಲದಿಂದಲೋ ಅಥವಾ ಅತೀವೃಷ್ಠಿಯಿಂದಲೋ ಪ್ರತಿಭಾರಿಯೂ ಒಂದಲ್ಲ ಒಂದು ರೀತಿಯಲ್ಲ ತೊಂದರೆ ಅನುಭವಿಸುತ್ತಲೇ ಇದ್ದಾರೆ ಹಾಗಾಗಿ ಹೀರು ಹಿಂದುಳಿದ ಮತಕ್ಷೇತ್ರಗಳಾಗಿವೆ. ಈಲ್ಲೇ ಶೀವಾನಂದ ಪಾಟೀಲರು ಹಾಗೂ ಎಂಬ ಪಾಟೀಲರು ಇಬ್ಬರು ಮಂತ್ರಿಗಳಿದ್ದಾರೆ ಕಾರಣ ಈ ಮೂರು ಮತಕ್ಷೇತ್ರಗಳ ಬಗ್ಗೆ ಹೆಚ್ಚು ನಿಗಾವಹಿಸಿ ಈ ಭಾಗದಲ್ಲಿ ರೈತರಿಗೆ ಅನುಕೂಲವಾಗುವ ಸಮಗ್ರ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಮತ್ತು ಕೆರೆ ತುಂಬಿಸುವಲ್ಲಿ ಕಾಳಜಿ ವಹಿಸಬೇಕು ಜೊತೆಗೆ ಮುಖ್ಯಮಂತ್ರಿ ಸಿದ್ರಾಮಯ್ಯನವರು ನಮ್ಮ ಮತಕ್ಷೇತ್ರಕ್ಕೆ ಈ ಇಬ್ಬರು ಸಚಿವರಿಗಿಂತ ಒಂದು ಗುಂಜಿಯಷ್ಟಾದರೂ ಹೆಚ್ಚಿನ ಅನುದಾನ ನೀಡುವ ಮೂಲಕ ಮುದ್ದೇಬಿಹಾಳ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಮುದ್ದೇಬಿಹಾಳ ಮತಕ್ಷೇತ್ರದ ಜನರು ಪ್ರಭುದ್ಧತೆಯನ್ನು ಹೊಂದಿದವರು ನ್ಯಾಯಕ್ಕೆ ನಿಷ್ಟೇಗೆ ಸ್ವಾಭಿಮಾನಕ್ಕೆ ಹೆಸರಾದವರು ಹಾಗಾಗೀಯೇ ಈ ಬಾರಿಯ ಚುನಾವಣೆಯಲ್ಲಿ ಪ್ರಭುದ್ಧತೆಯನ್ನು ಎತ್ತಿ ತೊರಿಸಿದ್ದಾರೆ ದಬ್ಬಾಳಿಕೆ ಧೌರ್ಜನ್ಯವನ್ನು ಎಂದೂ ಈಲ್ಲಿ ಸಹಿಸಿಲ್ಲ ಸ್ವಾಮಿನಗಳು ಇಲ್ಲಿದ್ದಾರೆ ತಿಳಿದು ಜನರಿಗೆ ಬುದ್ದಿವಾಧಗಳನ್ನು ಹೇಳುವುದÀನ್ನ ರಾಜಕಾರಿಣಿಗಳು ಕಲಿಯಬೇಕು ಎಂದರು.