ಕೀವ್ (ಉಕ್ರೇನ್), ಸೆ.೨೭- ಕಪ್ಪು ಸಮುದ್ರದ ನೌಕಾಪಡೆಯ ಕಮಾಂಡರ್ ವಿಕ್ಟರ್ ಸೊಕೊಲೊವ್ ಅವರನ್ನು ನಾವು ಹತ್ಯೆ ನಡೆಸಿದ್ದೇವೆ ಎಂದು ವಾದಿಸಿದ್ದ ಉಕ್ರೇನ್‌ಗೆ ಇದೀಗ ರಷ್ಯಾ ತಿರುಗೇಟು ನೀಡಿದೆ. ರಷ್ಯಾ ರಕ್ಷಣಾ ಸಚಿವರೊಂದಿಗಿನ ವೀಡಿಯೊ ಲಿಂಕ್‌ನಲ್ಲಿ ನಡೆದ ಸಭೆಯಲ್ಲಿ ಸೊಕೊಲೊವ್ ಭಾಗವಹಿಸಿರುವ ವಿಡಿಯೋವನ್ನು ಇದೀಗ ರಷ್ಯಾ ಬಿಡುಗಡೆ ಮಾಡಿ, ಉಕ್ರೇನ್ ಆರೋಪಕ್ಕೆ ತಣ್ಣೀರೆರಚಿದೆ. ಈ ಮೂಲಕ ಸೊಕೊಲೊವ್ ಇನ್ನೂ ಜೀವಂತವಾಗಿದ್ದಾರೆ ಎಂದು ರಷ್ಯಾ ತಿಳಿಸಿದೆ.
ಸೊಕೊಲೊವ್ ಮತ್ತು ೩೩ ಇತರ ಅಧಿಕಾರಿಗಳು ಕ್ರೈಮಿಯಾ ಆಕ್ರಮಿತ ಸೆವಾಸ್ಟೊಪೋಲ್‌ನಲ್ಲಿರುವ ಫ್ಲೀಟ್‌ನ ಮುಖ್ಯಾಲಯದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ವಿಶೇಷ ಪಡೆಗಳು ಹೇಳಿದ್ದವು. ಬಳಿಕ ಇದು ಜಾಗತಿಕ ಮಟ್ಟದಲ್ಲಿ ಹೆಚ್ಚು ಗಮನ ಸೆಳೆದಿತ್ತು. ಆದರೆ ಉಕ್ರೇನ್ ನೇರವಾಗಿಯೇ ಸೊಕೊಲೊವ್ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿರಲಿಲ್ಲ. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷಿಯನ್ನು ಕೂಡ ನೀಡಿರಲಿಲ್ಲ. ಆದರೆ ಇದೀಗ ರಷ್ಯಾದ ರಕ್ಷಣಾ ಸಚಿವರೊಂದಿಗೆ ವೀಡಿಯೊ ಲಿಂಕ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೋವನ್ನು ರಷ್ಯಾ ಬಿಡುಗಡೆ ಮಾಡಿದ್ದು, ಸೊಕೊಲೊವ್ ಅವರ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದೆ. ಈ ವಿಡಿಯೋದಲ್ಲಿ ಸೊಕೊಲೊವ್ ಅವರು ಭಾಗವಹಿಸಿರುವುದ ಕಂಡುಬಂದಿದೆ. ಈ ಸಭೆಯುವ ಮಂಗಳವಾರ ನಡೆದಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ತಿಳಿಸಿದೆ. ಸಹಜವಾಗಿಯೇ ರಷ್ಯಾದ ನಡೆಯಿಂದ ಉಕ್ರೇನ್‌ಗೆ ಇರಿಸು ಮುರಿಸು ಉಂಟಾಗಿದೆ.