ಕಪ್ಪು ಬಾವುಟ ಹಿಡಿದು ಪ್ರತಿಭಟನೆ

ಮೈಸೂರು, ಮೇ.26: ಕೇಂದ್ರದ ಮೋದಿ ಸರ್ಕಾರ 7 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಾಗೂ ದೆಹಲಿಯಲ್ಲಿ ರೈತರು ಕರಾಳ ಕೃಷಿ ಕಾಯ್ದೆ ಹಿಂಪಡೆಯುಲು ಒತ್ತಾಯಿಸಿ ನಡೆಸುತ್ತಿರುವ ಹೋರಾಟ 6 ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ ಕರಾಳ ದಿನ ಆಚರಣೆಯ ಭಾಗವಾಗಿ ಇಂದು ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಲ.ಜಗನ್ನಾಥ್, ಜಗದೀಶ್ ಸೂರ್ಯ ಕಛೇರಿ ಮುಂಭಾಗ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತಂದಿರುವ ಕರಾಳ ಕೃಷಿ ಕಾನೂನು ಹಿಂಪಡೆಯಿರಿ, ಕಾರ್ಮಿಕ ಸಂಹಿತೆ ವಾಪಸ್ಸಾಗಲಿ, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿ ಕುಟುಂಬಕ್ಕೆ ಕೋವಿಡ್ ಪರಿಹಾರವಾಗಿ 10 ಸಾವಿರ ನೀಡಬೇಕು, ಆಹಾರ ಧ್ಯಾನ ವಿತರಿಸಬೇಕು, ರೈತರ ಎಲ್ಲಾ ರೀತಿಯ ಸಾಲ ಮನ್ನಾ ಮಾಡಬೇಕು, ಎಲ್ಲರಿಗೂ ಉಚಿತ ಕೋವಿಡ್ ಚಿಕಿತ್ಸೆ ಹಾಗೂ ಲಸಿಕ ಒದಗಿಸಬೇಕೆಂದು ಒತ್ತಾಯಿಸಿದರು.