ಕಪ್ಪು ಪಟ್ಟಿ ಧರಿಸಿ ಅಂಚೆ ನೌಕರರ ಪ್ರತಿಭಟನೆ

ಕನಕಪುರ,ಮೇ.೩- ಕೇಂದ್ರ ಸರ್ಕಾರವು ಅಖಿಲ ಭಾರತೀಯ ಅಂಚೆ ಕಚೇರಿ ನೌಕರರ ಸಂಘವನ್ನು ರದ್ದು ಪಡಿಸಿರುವುದನ್ನು ವಿರೋಧಿಸಿ ಕನಕಪುರದ ಅಂಚೆ ನೌಕರರು ಕಪ್ಪುಪಟ್ಟಿ ಧರಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.
ರೈತ ಸಂಘ ನಡೆಸುತ್ತಿದ್ದ ಪ್ರತಿಭಟನೆಗೆ ಅಂಚೆ ನೌಕರರ ಸಂಘವು ಬೆಂಬಲ ನೀಡಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರವು ಅಂಚೆ ನೌಕರರ ಸಂಘವನ್ನು ರದ್ದುಪಡಿಸಿರುವುದು ಸರಿಯಾದ ಕ್ರಮ ಅಲ್ಲವೆಂದು ಎಂದು ಪ್ರತಿಭಟನಾ ಅಂಚೆ ನೌಕರರು ಆರೋಪಿಸಿದರು.
ಕೇಂದ್ರ ಸರ್ಕಾರ ಸಂಘ ರದ್ದುಪಡಿಸಿರುವುದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಕೈಗೆ ಕಪ್ಪುಬಟ್ಟೆಯನ್ನು ಕಂಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.