ಕಪ್ಪು ಚುಕ್ಕೆ ಪ್ರದೇಶದಲ್ಲಿ ಕಸ : ಪಾಲಿಕೆಯಿಂದ ದಂಡ

ದಾವಣಗೆರೆ ಸೆ.೧೫; ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾರ್ಡ್ ನಂ-೩೪ರಲ್ಲಿಯ ಹದಡಿ ರಸ್ತೆ ಮಾಗನೂರು ಬಸಪ್ಪ ಪೆಟ್ರೋಲ್ ಬಂಕ್‌ನ ಪೌಂಪೌಡ್ ಪಕ್ಕದಲ್ಲಿಯ ಕಪ್ಪು ಚುಕ್ಕೆ ಪ್ರದೇಶದಲ್ಲಿ ಸಾರ್ವಜನಿಕರು ಮನೆಯ ಕಸ ತಂದು ಹಾಕುತ್ತಿರುವ ಬಗ್ಗೆ ರಸ್ತೆಯಲ್ಲಿ ಓಡಾಡುವ ಜನರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಪಾಲಿಕೆಗೆ ಸಾಕಷ್ಟು ಬಾರಿ ದೂರಿರುತ್ತಾರೆ.
ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ವಾಹನಗಳಲ್ಲಿ ಕಸ ಹಾಕಲು/ಸುರಿಯಲು ಬಂದ ಒರ್ವ ಸಾರ್ವಜನಿಕರಿಗೆ ಮಹಾನಗರಪಾಲಿಕೆಯ ಸಿಬ್ಬಂದಿಗಳು ರೂ.೨೦೦೦/-ದಂಡ ವಿಧಿಸಿರುತ್ತಾರೆ. ಕಾರಣ ಪ್ರತಿನಿತ್ಯ ಮನೆಯ ಹತ್ತಿರ ಬರುವ ಮನೆ-ಮನೆ ಕಸ ಸಂಗ್ರಹಣೆ ವಾಹನಗಳಿಗೆ ಕಸ ನೀಡಿ ನಗರದ ಸ್ವಚ್ಚತೆಗೆ ಸಹಕರಿಸಬೇಕೆಂದು ಮಹಾನಗರಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.